Friday, March 13, 2026
HomeLocal Newsಬಸ್ ನಿಲ್ದಾಣದಲ್ಲೂ ಬಜೆಟ್ ನೇರ ಪ್ರಸಾರ

ಬಸ್ ನಿಲ್ದಾಣದಲ್ಲೂ ಬಜೆಟ್ ನೇರ ಪ್ರಸಾರ

ಕಾರವಾರ: ರಾಜ್ಯದ‌ ಇತಿಹಾಸದಲ್ಲೇ ಇದೇ‌ ಮೊದಲ ಬಾರಿಗೆ ರಾಜ್ಯದ ಎಲ್ಲಾ ರಸ್ತೆ ಸಾರಿಗೆ ನಿಗಮಗಳ ಬಸ್ ನಿಲ್ದಾಣಗಳಲ್ಲಿ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ‌ ಐತಿಹಾಸಿಕ 17ನೇ ಬಜೆಟ್ ನೇರ ಪ್ರಸಾರವನ್ನು ಎಲ್‌ಇಡಿ ಪರದೆ ಮೇಲೆ ಪ್ರಯಾಣಿಕರು ವೀಕ್ಷಿಸುವ ಮೂಲಕ ಖುಷಿಪಟ್ಟರು.‌

ವಿಧಾನಸೌಧದಲ್ಲಿ ಮುಖ್ಯಮಂತ್ರಿ‌ ಸಿದ್ದರಾಮಯ್ಯ ಬಜೆಟ್‌ ಮಂಡಿಸುತ್ತಿದ್ದಂತೆಯೇ ರಾಜ್ಯದ‌ ಬಹುತೇಕ ಬಸ್ ನಿಲ್ದಾಣಗಳಲ್ಲಿ ಬಜೆಟ್ ನೇರ ಪ್ರಸಾರವನ್ನು ವೀಕ್ಷಿಸಲು ಅವಕಾಶ ಕಲ್ಪಿಸಿದ್ದರಿಂದ ಬಸ್ ನಿಲ್ದಾಣಗಳಲ್ಲಿದ್ದ ಪ್ರಯಾಣಿಕರು ಬಜೆಟ್ ಮಂಡನೆಯನ್ನು ನೇರವಾಗಿ ಕಣ್ತುಂಬಿಸಿಕೊಳ್ಳುವ ಮೂಲಕ ಸಂತೋಷ ವ್ಯಕ್ತಪಡಿಸಿದರು.

ಸಾಮಾನ್ಯವಾಗಿ ಸಾರ್ವಜನಿಕರಿಗೆ ಇಂತಹ ಕಾರ್ಯಕ್ರಮಗಳನ್ನು ನೇರವಾಗಿ ವೀಕ್ಷಿಸಲು ಅವಕಾಶ ಕಡಿಮೆ. ಆದರೆ ಈ ಬಾರಿ ಬಜೆಟ್ ಮಂಡನೆ ಕುರಿತು ಸರ್ಕಾರ ಕೈಗೊಂಡ ಈ ಹೊಸ ಪ್ರಯತ್ನಕ್ಕೆ‌ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಬಸ್ ನಿಲ್ದಾಣಗಳಲ್ಲಿ ಪ್ರಯಾಣಕ್ಕಾಗಿ ಕಾಯುತ್ತಿದ್ದ ಅನೇಕರು ಎಲ್‌ಇಡಿ ಪರದೆಗಳ ಮೂಲಕ ಬಜೆಟ್ ಮಂಡನೆಯನ್ನು ಏಕಾಗ್ರತೆಯಿಂದ ವೀಕ್ಷಿಸಿ, ಸರ್ಕಾರದ ವಿವಿಧ ಯೋಜನೆಗಳು ಹಾಗೂ ಅಭಿವೃದ್ಧಿ ಕ್ರಮಗಳ ಕುರಿತು ಮಾಹಿತಿ ಪಡೆಯಲು ಸಾಧ್ಯವಾಯಿತು.

ಸಾರ್ವಜನಿಕರಿಗೆ ಸರ್ಕಾರದ ಕಾರ್ಯಕ್ರಮಗಳನ್ನು ನೇರವಾಗಿ ತಲುಪಿಸುವ ಉದ್ದೇಶದಿಂದ ಕೈಗೊಂಡ ಈ ಕ್ರಮವನ್ನು ಕಾರವಾರದ ಬಸ್ ನಿಲ್ದಾಣದಲ್ಲಿ ಜನತೆ ಸ್ವಾಗತಿಸಿದರು. ಬಸ್ ನಿಲ್ದಾಣಗಳಲ್ಲಿ ಅಳವಡಿಸಿರುವ ಎಲ್.ಇ.ಡಿ. ಪರದೆಗಳಲ್ಲಿ ಪ್ರಯಾಣಿಕರು ಬಜೆಟ್ ಮಂಡನೆ ವೀಕ್ಷಿಸಿ ಸಂತಸ  ವ್ಯಕ್ತಪಡಿಸಿದರು ಎಂದು  ಕಾರವಾರ ಘಟಕದ  ವ್ಯವಸ್ಥಾಪಕಿ ಸೌಮ್ಯ ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share