Friday, March 13, 2026
HomeLocal Newsಅಂಗನವಾಡಿ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

ಅಂಗನವಾಡಿ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ ವಿವಿಧ ಕಾರಣಗಳಿಂದಾಗಿ ಖಾಲಿಯಾಗಿರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳಿಗಾಗಿ ಸ್ವೀಕೃತಗೊಂಡ ಅರ್ಜಿಗಳನ್ನು ಸರ್ಕಾರದ ಮಾರ್ಗಸೂಚಿಯಂತೆ ತಾಲೂಕು ಮಟ್ಟದ ಅರ್ಜಿ ಪರಿಶೀಲನಾ ಸಮಿತಿಯಲ್ಲಿ ಪರಿಶೀಲಿಸಿ, ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ತಯಾರಿಸಿ ಜಿಲ್ಲಾ ಕಚೇರಿಗೆ ಸಲ್ಲಿಸಿದ್ದು, ಜಿಲ್ಲಾ ಮಟ್ಟದ ಆಯ್ಕೆ ಸಮಿತಿ ಸಭೆಯನ್ನು ಫೆ. 25ರಂದು ನಡೆಸಿದ್ದು ನಿಯಮಾನುಸಾರ ಆಯ್ಕೆ ಮಾಡಿದ ತಾತ್ಕಾಲಿಕ ಪಟ್ಟಿ ಪ್ರಕಟಿಸಲಾಗಿದೆ.

ಅಂಕೋಲಾ ಅಂಗನವಾಡಿ ಕಾರ್ಯಕರ್ತೆರು-2, ಸಹಾಯಕಿ-22, ಭಟ್ಕಳ ಕಾರ್ಯಕರ್ತೆ-1, ಸಹಾಯಕಿ-16, ದಾಂಡೇಲಿ ಸಹಾಯಕಿ-9, ಹೊನ್ನಾವರ ಕಾರ್ಯಕರ್ತೆ-1, ಸಹಾಯಕಿ-11, ಕಾರವಾರ ಸಹಾಯಕಿ-8, ಕುಮಟಾ ಸಹಾಯಕಿ-8, ಮುಂಡಗೋಡ ಕಾರ್ಯಕರ್ತೆ-2, ಸಹಾಯಕಿ-12, ಸಿದ್ದಾಪುರ ಕಾರ್ಯಕರ್ತೆ-2, ಸಹಾಯಕಿ-15, ಶಿರಸಿ ಕಾರ್ಯಕರ್ತೆ-2 , ಸಹಾಯಕಿ-34, ಜೋಯಿಡಾ ಕಾರ್ಯಕರ್ತೆ-5, ಸಹಾಯಕಿ-14, ಯಲ್ಲಾಪುರ ಕಾರ್ಯಕರ್ತೆ-3 ಸಹಾಯಕಿ-12, ಹಳಿಯಾಳ ಕಾರ್ಯಕರ್ತೆ-2, ಸಹಾಯಕಿ-16 ಸೇರಿದಂತೆ ಒಟ್ಟು 20 ಕಾರ್ಯಕರ್ತೆಯರು ಹಾಗೂ 177 ಸಹಾಯಕಿಯರನ್ನು ಆಯ್ಕೆ ಮಾಡಲಾಗಿದೆ.

ಸದರಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಕಿಯರ ಆಯ್ಕೆಯಾಗಿರುವ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಜಿಲ್ಲೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ/ಸಂಬಂಧಪಟ್ಟ ಗ್ರಾಮ ಪಂಚಾಯತ್ ಹಾಗೂ ಅಂಗನವಾಡಿ ಕೇಂದ್ರಗಳ ನಾಮಫಲಕಗಳಲ್ಲಿ ಪ್ರದರ್ಶಿಸಲಾಗಿದೆ.

ಅರ್ಜಿ ಸಲ್ಲಿಸಿದವರಲ್ಲಿ ಯಾರಾದರೂ ಆಕ್ಷೇಪಿಸುವವರಿದ್ದಲ್ಲಿ ತಮ್ಮ ಆಕ್ಷೇಪಣೆಯನ್ನು ಕಡ್ಡಾಯವಾಗಿ ಸಮರ್ಪಕ/ಸರಿಯಾದ ಪೂರಕ ಅರ್ಹ ದಾಖಲೆಗಳೊಂದಿಗೆ ಮಾ. 6ರೊಳಗಾಗಿ ಸಂಬಂಧಪಟ್ಟ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಸಲ್ಲಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share