Thursday, October 22, 2026
HomeLocal Newsಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ: ಜಿಲ್ಲೆಯಲ್ಲಿ 16,039 ಮತದಾರರು

ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ: ಜಿಲ್ಲೆಯಲ್ಲಿ 16,039 ಮತದಾರರು

ಕಾರವಾರ: ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯ ಮತದಾನ ಪ್ರಕ್ರಿಯೆಯನ್ನು ಮುಕ್ತ, ಪಾರದರ್ಶಕ ಹಾಗೂ ಶಾಂತಿಯುತವಾಗಿ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲೆಯಾದ್ಯಂತ ಒಟ್ಟು 25 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಮತಪೆಟ್ಟಿಗೆ ಸೇರಿದಂತೆ ಅಗತ್ಯ ಚುನಾವಣಾ ಸಾಮಗ್ರಿಗಳೊಂದಿಗೆ ಪೊಲೀಸ್ ಭದ್ರತೆಯಲ್ಲಿ ತಮಗೆ ನಿಯೋಜಿಸಲಾದ ಮತಗಟ್ಟೆಗಳನ್ನು ತಲುಪಿದ್ದಾರೆ.

ಜಿಲ್ಲೆಯಲ್ಲಿ 8,028 ಪುರುಷರು ಹಾಗೂ 8,011 ಮಹಿಳೆಯರು ಸೇರಿದಂತೆ ಒಟ್ಟು 16,039 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಯಾವುದೇ ಅಕ್ರಮಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಚುನಾವಣಾ ಕಾರ್ಯಕ್ಕೆ 34 ಪಿಆರ್‌ಒಗಳು, 35 ಎಪಿಆರ್‌ಒಗಳು, 62 ಪಿಒಗಳು, 25 ಮೈಕ್ರೋ ವೀಕ್ಷಕರು ಹಾಗೂ 125 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಚುನಾವಣೆಯ ಅಂತಿಮ ಕಣದಲ್ಲಿ ಕಾಂಗ್ರೆಸ್‌ನ ಮೋಹನ ಲಿಂಬಿಕಾಯಿ, ಬಿಜೆಪಿಯ ಎಸ್.ವಿ. ಸಂಕನೂರ, ಕರ್ನಾಟಕ ರಾಷ್ಟ್ರ ಸಮಿತಿಯ ನಿಶಾಂತ ಶಂಕರ ಬಂಕಾಪೂರ, ಕಿತ್ತೂರ ಕಲ್ಯಾಣ ಕರ್ನಾಟಕ ಸೇನೆಯ ಮಲ್ಲಿಕಾರ್ಜುನ ಚನ್ನಪ್ಪ ಗಂಗಾಧರ ಹಾಗೂ ಜನತಾ ಚಳುವಳಿ ಭಾರತ ಪಕ್ಷದ ತಳವಾರ ಶಿವಕುಮಾರ ಸೇರಿದಂತೆ ಒಟ್ಟು 14 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಪಕ್ಷೇತರ ಅಭ್ಯರ್ಥಿಗಳಾಗಿ ಅಬ್ದುಲ್ ಮನ್ನಾನ, ಡಾ. ಜಿ.ಎಚ್. ಇಮ್ರಾಪೂರ, ಉಮೇಶ ಕೃಷ್ಣಪ್ಪ ದೈವಜ್ಞ, ಕೃಷ್ಣ ಎಚ್. ಬಳೆಗಾರ, ಕಾಂತಕುಮಾರ್ ಆರ್., ಜಿಶಾನ ಡಿ. ಸಿರಸಂಗಿ, ಜೀಶಾನ ಅಹ್ಮದಖಾನ ಪಠಾಣ, ಬಸವರಾಜ ಶಂಕರಪ್ಪ ಕೊಟಗಿ ಹಾಗೂ ಸಂತೋಷ ಮನೋಹರ ವೆರ್ಣೇಕರ್ ಕಣದಲ್ಲಿದ್ದಾರೆ.

ಅಕ್ಟೋಬರ್ 27ರಂದು ಬೆಳಗ್ಗೆ 8 ಗಂಟೆಯಿಂದ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಮತ ಎಣಿಕೆ ನಡೆಯಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share