ಧಾರವಾಡ/ಕಾರವಾರ: ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆಯ ಮತ ಎಣಿಕೆಯ ಎರಡನೇ ಸುತ್ತಿನಲ್ಲೂ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಎರಡನೇ ಸುತ್ತಿನಲ್ಲಿ ಎಣಿಕೆಯಾದ 14,000 ಮತಗಳ ಪೈಕಿ ಸಂಕನೂರ 6,161 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಮೋಹನ್ ಲಿಂಬಿಕಾಯಿ 4,697 ಮತಗಳನ್ನು ಪಡೆದಿದ್ದಾರೆ.
ಮೊದಲ ಎರಡು ಸುತ್ತುಗಳಲ್ಲಿ ಒಟ್ಟು 28,001 ಮತಗಳ ಎಣಿಕೆ ಪೂರ್ಣಗೊಂಡಿದ್ದು, ಸಂಕನೂರ 12,620 ಮತಗಳನ್ನು ಹಾಗೂ ಮೋಹನ್ ಲಿಂಬಿಕಾಯಿ 9,091 ಮತಗಳನ್ನು ಪಡೆದಿದ್ದಾರೆ. ಈ ಮೂಲಕ ಸಂಕನೂರ 3,529 ಮತಗಳ ಅಂತರದ ಮುನ್ನಡೆ ಸಾಧಿಸಿದ್ದಾರೆ.