Friday, March 13, 2026
HomeCrimeತೆಂಗಿನ ಮರದಿಂದ ಬಿದ್ದು ಯುವಕ ಸಾ>ವು

ತೆಂಗಿನ ಮರದಿಂದ ಬಿದ್ದು ಯುವಕ ಸಾ>ವು

ಯಲ್ಲಾಪುರ: ತೆಂಗಿನಕಾಯಿ ಕೀಳಲು ಮರವೇರಿಯ ಯುವಕನೊಬ್ಬ ಮರದಿಂದ ಬಿದ್ದು ಸಾ>ವನ್ನಪ್ಪಿರುವ ಘಟನೆ ಯಲ್ಲಾಪುರ ತಾಲೂಕಿನ ಮಾಗೋಡಿನಲ್ಲಿ ವರದಿಯಾಗಿದೆ.

ಮಾಗೋಡಿನ ಕಂಚಿತಗ್ಗುವಿನ ವಿನಾಯಕ ದೇವೇಂದ್ರ ಸಿದ್ದಿ (25 ವರ್ಷ) ಈತ ಫೆ. 7ರಂದು ಸುಮಾರು 11.30ರ ಹೊತ್ತಿಗೆ ತಮ್ಮ ಅಡಿಕೆ ತೋಟದಲ್ಲಿರುವ ತೆಂಗಿನ ಮರದಲ್ಲಿನ ತೆಂಗಿನ ಕಾಯಿ ಕೀಳಲು ಹೋಗುತ್ತೇನೆಂದು ಹೋದ ಸಂದರ್ಭದಲ್ಲಿ ಆಕಸ್ಮಿಕವಾಗಿ ತೆಂಗಿನ ಮರದಿಂದ ಬಿದ್ದು, ಎರಡೂ ಕಾಲುಗಳಿಗೆ ಗಂಭೀರ ಸ್ವರೂಪದ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಎಷ್ಟು ಹೊತ್ತಾದರೂ ವಿನಾಯಕ ಮನೆಗೆ ಬಾರದೇ ಇರುವುದನ್ನು ಗಮನಿಸಿ, ತೋಟದಲ್ಲಿ ಹುಡುಕಾಡಿದಾಗ ಶವವಾಗಿ ಪತ್ತೆಯಾಗಿದ್ದಾನೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share