Friday, July 24, 2026
Join WhatsApp Group
HomeHealthಎಚ್ಚರವಾಗಿರಿ, ಇಂತಹ ಅಪಾಯಗಳು ನಮ್ಮ ನಡುವೆಯೂ ಇರಬಹುದು!

ಎಚ್ಚರವಾಗಿರಿ, ಇಂತಹ ಅಪಾಯಗಳು ನಮ್ಮ ನಡುವೆಯೂ ಇರಬಹುದು!

ಆಂಧ್ರದಲ್ಲಿ ಕಲುಷಿತ ಹಾಲು ದುರಂತ: ಮೃತರ ಸಂಖ್ಯೆ 11ಕ್ಕೆ ಏರಿಕೆ

ಆಂಧ್ರಪ್ರದೇಶ: ರಾಜಮಹೇಂದ್ರವರಂನಲ್ಲಿ ನಡೆದ ಕಲುಷಿತ ಹಾಲು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಇನ್ನೂ ಒಂಬತ್ತು ಮಂದಿ ನಗರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಭಾನುವಾರ 73 ವರ್ಷದ ಸೇನಾಪತಿ ರಾಮಲಕ್ಷ್ಮಿ ಎಂಬುವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮೃತಪಟ್ಟರು.

ಫೆಬ್ರವರಿ 22ರಂದು 76 ವರ್ಷದ ತಾಡಿ ಕೃಷ್ಣವೇಣಿ ಅವರು ಸರ್ಕಾರಿ ಆಸ್ಪತ್ರೆಯಲ್ಲಿ ಅನೂರಿಯಾ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದರಿಂದ ಈ ಪ್ರಕರಣ ಬೆಳಕಿಗೆ ಬಂದಿತ್ತು. ಬಳಿಕ ಅವರ ಪುತ್ರ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿತ್ತು.

ತನಿಖೆಯ ವೇಳೆ ನರಸಾಪುರಂ ಗ್ರಾಮದ ವರಲಕ್ಷ್ಮಿ ಮಿಲ್ಕ್ ಸೆಂಟರ್‌ನಿಂದ ಹಾಲು ಮತ್ತು ಹಾಲು ಉತ್ಪನ್ನಗಳ ಮಾದರಿಗಳನ್ನು ಸಂಗ್ರಹಿಸಿ Forensic Science Laboratory ಹಾಗೂ Regional Forensic Science Laboratoryಗೆ ಪರೀಕ್ಷೆಗೆ ಕಳುಹಿಸಲಾಗಿತ್ತು. ಜೊತೆಗೆ ಅಸ್ವಸ್ಥರಾದವರ ರಕ್ತದ ಮಾದರಿಗಳನ್ನೂ ವಿಶ್ಲೇಷಣೆ ಮಾಡಲಾಗಿತ್ತು.

ಪರೀಕ್ಷಾ ವರದಿಗಳ ಪ್ರಕಾರ ವಿಷಕಾರಿ ರಾಸಾಯನಿಕವಾದ Ethylene Glycol ಮಿಶ್ರಿತ ಹಾಲು ಸೇವಿಸಿದ ಪರಿಣಾಮ ತೀವ್ರ ಮೂತ್ರಪಿಂಡ ವೈಫಲ್ಯ ಉಂಟಾಗಿ ನಂತರ ಬಹು ಅಂಗ ವೈಫಲ್ಯದಿಂದ ಮೃತಪಟ್ಟಿದ್ದಾರೆ ಎಂಬುದು ದೃಢಪಟ್ಟಿದೆ.

ಏನಿದು Ethylene Glycol: Ethylene Glycol ಎನ್ನುವುದು ಬಣ್ಣವಿಲ್ಲದ, ಸಿಹಿ ರುಚಿಯಿರುವ ಆದರೆ ಅತ್ಯಂತ ವಿಷಕಾರಿ ಕೈಗಾರಿಕಾ ರಾಸಾಯನಿಕ ಪದಾರ್ಥ. ಸಾಮಾನ್ಯವಾಗಿ ವಾಹನಗಳ ಆಂಟಿಫ್ರೀಸ್ (ಎಂಜಿನ್ ಕೂಲಂಟ್), ಬ್ರೇಕ್ ಆಯಿಲ್‌ ಹಾಗೂ ವಿವಿಧ ರಾಸಾಯನಿಕ ಮತ್ತು ಪ್ಲಾಸ್ಟಿಕ್ ಉತ್ಪಾದನೆಯಲ್ಲಿ ಬಳಸಲಾಗುತ್ತದೆ.

ಇದು ಮಾನವ ದೇಹಕ್ಕೆ ಸೇರಿದರೆ ಅತ್ಯಂತ ಅಪಾಯಕಾರಿ ಪರಿಣಾಮಗಳನ್ನು ಉಂಟುಮಾಡುತ್ತದೆ. ಆಂಧ್ರಪ್ರದೇಶದ ರಾಜಮಹೇಂದ್ರವರಂನಲ್ಲಿ ಸಂಭವಿಸಿದ ಕಲುಷಿತ ಹಾಲು ದುರಂತದಲ್ಲಿ ಹಾಲಿಗೆ ಈ ವಿಷಕಾರಿ ರಾಸಾಯನಿಕ ಮಿಶ್ರಣವಾಗಿರುವುದು ಫೊರೆನ್ಸಿಕ್ ಪರೀಕ್ಷೆಯಲ್ಲಿ ಪತ್ತೆಯಾಗಿದೆ.

ಈ ರಾಸಾಯನಿಕ ದೇಹಕ್ಕೆ ಸೇರಿದಾಗ ಆರಂಭದಲ್ಲಿ ತಲೆಸುತ್ತು, ವಾಕರಿಕೆ, ಗಾಬರಿ, ಉಸಿರಾಟದ ತೊಂದರೆ ಮೊದಲಾದ ಲಕ್ಷಣಗಳು ಕಾಣಿಸಬಹುದು. ನಂತರ ಮೂತ್ರಪಿಂಡಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿ ಹೃದಯ ಮತ್ತು ಮೆದುಳು ಸೇರಿದಂತೆ ಹಲವು ಅಂಗಗಳಿಗೆ ಹಾನಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಸಮಯಕ್ಕೆ ಚಿಕಿತ್ಸೆ ಸಿಗದಿದ್ದರೆ ಇದು ಪ್ರಾಣಾಪಾಯಕ್ಕೂ ಕಾರಣವಾಗಬಹುದು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share