Friday, July 24, 2026
Join WhatsApp Group
HomeStateಸಾಮಾಜಿಕ ಬದಲಾವಣೆಯಲ್ಲಿ ಶ್ರೀ ರೇಣುಕಾಚಾರ್ಯರ ಕೊಡುಗೆ ಅಪಾರ

ಸಾಮಾಜಿಕ ಬದಲಾವಣೆಯಲ್ಲಿ ಶ್ರೀ ರೇಣುಕಾಚಾರ್ಯರ ಕೊಡುಗೆ ಅಪಾರ

ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಆರಾಧ್ಯ ಕಿಶೋರ್ ಅಭಿಮತ

ಮೈಸೂರು/ಪಿರಿಯಾಪಟ್ಟಣ: ಮನುಷ್ಯ ನಾನು ಎಂಬುದನ್ನು ಬಿಟ್ಟು ನಾವು ಎಂಬುದನ್ನು ಪ್ರತಿಪಾದಿಸಿದಾಗ ಸಮಾಜದಲ್ಲಿ ಬದಲಾವಣೆ ಕಾಣಬಹುದು. ಈ ನಿಟ್ಟಿನಲ್ಲಿ ಜಗದ್ಗುರು ಶ್ರೀ ರೇಣುಕಾಚಾರ್ಯರ ಕೊಡುಗೆ ಅಪಾರವಾಗಿದೆ. ಮಾನವ ಧರ್ಮಕ್ಕೆ ಜಯವಾಗಲಿ ಎಂಬುದನ್ನು ಜಗತ್ತಿಗೆ ಸಾರಿದವರು ಶ್ರೀ ರೇಣುಕಾಚಾರ್ಯರಾಗಿದ್ದರು. ಬಾಲ್ಯದಲ್ಲೇ ಭಕ್ತಿಯಿಂದ ಪರಿಪೂರ್ಣರಾಗಿ ಋಷಿಗಳ ಜೊತೆಯಲ್ಲಿ ನಿರಂತರ ಜ್ಞಾನಸಾಧನೆ ನಡೆಸಿ ಶೈವ ತತ್ವ ಆಳವಾಗಿ ಅಧ್ಯಯನ ಮಾಡಿ ಲಿಂಗಾಯತ ಧರ್ಮ ಸ್ಥಾಪನೆ ಮಾಡುವುದರ ಮೂಲಕ ಶೈವ ತತ್ವಶಾಸ್ತ್ರವನ್ನು ಜನಸಾಮಾನ್ಯರಿಗೆ ತಲುಪಿಸಿದ ಮಹಾನ್ ಸಂತರು ರೇಣುಕಾಚಾರ್ಯರು ಎಂದು ಶ್ರೀರಾಮ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಆರಾಧ್ಯ ಕಿಶೋರ್ ಹೇಳಿದರು.

ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಪಟ್ಟಣದ ತಾಲೂಕು ಆಡಳಿತ ಭವನದಲ್ಲಿ ತಾಲೂಕು ಆಡಳಿತ ವತಿಯಿಂದ ಪಿರಿಯಾಪಟ್ಟಣದಲ್ಲಿ ಜರುಗಿದ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಿರಸ್ತೆದಾರ್ ಶಕೀಲಾ ಬಾನು ಅವರು ಮಾತನಾಡಿ, ಮಹನೀಯರ ಜಯಂತಿಗಳು ಕೇವಲ ಆಚರಣೆಗೆ ಸೀಮಿತವಾಗದೆ ಅವರ ಜೀವನ ತತ್ವ-ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದರು.

ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ತಾಲೂಕಾಧ್ಯಕ್ಷ ಹಿಟ್ನಹಳ್ಳಿ ಪರಮೇಶ್ ಮಾತನಾಡಿ, ಮಹನೀಯರ ಜಯಂತಿ ಆಚರಣೆ ಕೇವಲ ಒಂದು ವರ್ಗಕ್ಕೆ ಸೀಮಿತವಾಗದೆ ಪ್ರತಿಯೊಂದು ಸಮಾಜದವರು ಭಾಗವಹಿಸಿದಾಗ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ ಎಂದರು.

ತಾಲೂಕಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹೊಸಹಳ್ಳಿ ಕೃಷ್ಣೇಗೌಡ, ಪುರಸಭಾ ಮಾಜಿ ಸದಸ್ಯೆ ಮಂಜುಳಾ ರಾಜ್, ಪತ್ರಕರ್ತ ಬೆಕ್ಕರೆ ಸತೀಶ್ ಆರಾಧ್ಯ ಕಾರ್ಯಕ್ರಮ ಕುರಿತು ಮಾತಾನಾಡಿದರು. ಈ ವೇಳೆ ಪ್ರಧಾನ ಭಾಷಣಕಾರರಾದ ಆರಾಧ್ಯ ಕಿಶೋರ್ ಅವರನ್ನು ತಾಲೂಕು ಆಡಳಿತ ಮತ್ತು ವಿವಿಧ ಸಮಾಜ ಮುಖಂಡರನ್ನು ಆರಾಧ್ಯ ಸಮಾಜ ವತಿಯಿಂದ ಸನ್ಮಾನಿಸಲಾಯಿತು.

ಆರಂಭದಲ್ಲಿ ಹರಳಹಳ್ಳಿ ಗುರುಮಠದ ಶ್ರೀಕಂಠರಾಧ್ಯ ಶಾಸ್ತ್ರಿಗಳ ನೇತೃತ್ವದಲ್ಲಿ ಶ್ರೀ ರೇಣುಕಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗಣ್ಯರು ಪುಷ್ಪಾರ್ಚನೆ ಮಾಡಿದರು.

ಈ ಸಂದರ್ಭ ತಾ.ಪಂ ಅಧಿಕಾರಿ ರಂಗನಾಥ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಶೇಖರ್, ಪುರಸಭೆ ಮುಖ್ಯಧಿಕಾರಿ ಮಧು, ರೇಷ್ಮೆ ಇಲಾಖೆ ಅಧಿಕಾರಿ ಚಂದ್ರೇಗೌಡ, ಆಹಾರ ಇಲಾಖೆ ಶಿರಸ್ತೇದಾರ್ ಸಣ್ಣಸ್ವಾಮಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಕುಸುಮ, ಸಿಡಿಪಿಓ ಇಲಾಖೆ ಅಧಿಕಾರಿ ಸವಿತಾ, ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿ ಸತ್ಯಸವಿ, ವೀರಶೈವ ಲಿಂಗಾಯಿತ ಮಹಾಸಭಾ ಯುವ ಘಟಕ ಅಧ್ಯಕ್ಷ ಕಿರಂಗೂರು ಅಭಿ, ಪುರಸಭಾ ಮಾಜಿ ಅಧ್ಯಕ್ಷ ಪ್ರಕಾಶ್ ಸಿಂಗ್, ಮಾಜಿ ಸದಸ್ಯರಾದ ನಿರಂಜನ್, ಶಿವರಾಮೇಗೌಡ, ರೋಟರಿ ಐಕಾನ್ಸ್ ಅಧ್ಯಕ್ಷರಾದ ಎಂ.ಬಿ. ಸಂಪತ್, ರೈತ ಸಂಘದ ಸ್ವಾಮಿಗೌಡ, ಕಾವೇರಮ್ಮ, ನಾಗೇಂದ್ರ, ಕೊಣಸೂರು ಆನಂದ್, ಆರಾಧ್ಯ ಸಮಾಜ ಮುಖಂಡರಾದ ಎಂ.ಬಿ. ಮಲ್ಲಾರಾಧ್ಯ, ಮಂಜು, ಶಿಕ್ಷಕ ಮಹೇಶ್, ನಾಯಕ ಸಮಾಜದ ಪಿ.ಪಿ. ಪುಟ್ಟಯ್ಯ, ಅಲ್ಪಸಂಖ್ಯಾತ ಸಮಾಜದ ಅಬ್ದುಲ್ ವಾಜಿದ್, ಕುರುಬ ಸಮಾಜದ ಪಂಚವಳ್ಳಿ ಲೋಹಿತ್, ದಲಿತ ಸಮಾಜದ ಕೋಮಲಾಪುರ ಶಿವರಾಜ್, ಒಕ್ಕಲಿಗ ಸಮಾಜದ ಪುರುಷೋತ್ತಮ್, ಕಾಯಕ ಸಮಾಜದ ಶಿವರಾಜ್ ಕೊಣಸೂರು, ನಾಮಧಾರಿ ಗೌಡ ಸಮಾಜದ ರಮೇಶ್ ಸೇರಿದಂತೆ ನಿವೃತ್ತ ಮುಖ್ಯ ಶಿಕ್ಷಕರಾದ ಎಂ.ಬಿ ಮಲ್ಲಾರಾಧ್ಯ, ಅನಿತಾ ಶರತ್, ನಾಗವೇಣಿ ಬಸವಾರಾಧ್ಯ, ವಿನುತಾ ಕಾಶಿಆರಾಧ್ಯ, ಲತಾ ಸೋಮಶೇಖರಾರಾಧ್ಯ, ರಮ್ಯ ಸತೀಶಾರಾಧ್ಯ, ಗೀತಾ ಪ್ರಶಾಂತಾರಾಧ್ಯ, ಮಹೇಶ್ ಆರಾಧ್ಯ, ಮಾದೇಶ್ ಆರಾಧ್ಯ, ಸೋಮರಾಧ್ಯ, ವನಿತಾ ಕಿಶೋರ್, ಜಯಕುಮಾರ್, ಶೇಖರ್, ವಿಜಯ್ ಸೇರಿದಂತೆ ತಾಲೂಕು ಆಡಳಿತ ಕಚೇರಿ ಸಿಬ್ಬಂದಿ ಇದ್ದರು.

ವರದಿ: ಪ್ರಸನ್ನಕುಮಾರ್ ಬಿ.ಎಸ್.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share