ಮೈಸೂರು: ಪಿರಿಯಾಪಟ್ಟಣ ತಾಲ್ಲೂಕಿನ ಹಾರನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಹತ್ತಿರ ಬೈಕ್ ಸಾಗುತ್ತಿದ್ದ ವೇಳೆ ಆಕಸ್ಮಿಕವಾಗಿ ನಾಯಿ ಅಡ್ಡ ಬಂದ ಪರಿಣಾಮ ದ್ವಿಚಕ್ರ ವಾಹನ ಸವಾರನ ನಿಯಂತ್ರಣ ತಪ್ಪಿ ಬೈಕ್ ಬಿದ್ದ ಪರಿಣಾಮ ಬಾಲಕ ಶಶಿಕುಮಾರ್ (7) ಮೃ*ತಪಟ್ಟಿದ್ದಾರೆ.
ಮೂಲತಃ ಬೆಕ್ಕರೆ ಗ್ರಾಮದವರಾದ ಕುಮಾರ್ ಮತ್ತು ಅವರ ಪತ್ನಿ ರೂಪಾ ಎಂಬುವರು ಅವರ ಸಂಬಂಧಿಕರ ಮನೆ ಅಳುವಾರ ಗ್ರಾಮಕ್ಕೆ ಹೋಗಿ ಸ್ವಗ್ರಾಮಕ್ಕೆ ಹಿಂದಿರುಗುವಾಗ ಈ ಅವಘಡ ಸಂಭವಿಸಿದೆ.
ಅಪಘಾತದಲ್ಲಿ ಕುಮಾರ್, ರೂಪಾ ಹಾಗೂ ಅವರ ಪುತ್ರ ಶಶಿಕುಮಾರ್ ಗಾಯಗೊಂಡಿದ್ದು, ಸ್ಥಳೀಯರ ಸಹಾಯದಿಂದ ಅವರನ್ನು ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ತೀವ್ರವಾಗಿ ಗಾಯಗೊಂಡಿದ್ದ ಶಶಿಕುಮಾರ್ ಮಾರ್ಗ ಮಧ್ಯದಲ್ಲಿ ಮೃ*ತಪಟ್ಟಿದ್ದಾರೆ.
ಈ ಕುರಿತು ರೂಪಾ ಅವರ ಸಹೋದರ ರಾಮಕೃಷ್ಣ ಬೆಟ್ಟದಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.