Saturday, May 30, 2026
HomeLocal Newsಕಪ್ಪೆಗದ್ದೆ ಅರಣ್ಯದಲ್ಲಿ ಅಪರಿಚಿತ ಮೃ*ತದೇಹ ಪತ್ತೆ

ಕಪ್ಪೆಗದ್ದೆ ಅರಣ್ಯದಲ್ಲಿ ಅಪರಿಚಿತ ಮೃ*ತದೇಹ ಪತ್ತೆ

ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಪ್ಪೆಗದ್ದೆ ಸಮೀಪದ ಅರಣ್ಯ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಯ ಮೃ*ತದೇಹ ಪತ್ತೆಯಾದ ಘಟನೆ ನಡೆದಿದೆ. ಮಾರ್ಚ್ 28, 2026ರಂದು ಈ ಘಟನೆ ಬೆಳಕಿಗೆ ಬಂದಿದ್ದು, ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸರ ಪ್ರಕಾರ, ಮೃತದೇಹವು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೃತ ವ್ಯಕ್ತಿಯ ವಯಸ್ಸು ಸುಮಾರು 30 ರಿಂದ 40 ವರ್ಷಗಳ ನಡುವೆ ಇರಬಹುದು ಎಂದು ಅಂದಾಜಿಸಲಾಗಿದೆ.

ಮೃತನು ತಿಳಿ ಹಳದಿ ಬಣ್ಣದ ಶರ್ಟ್, ಕಾಫಿ ಬಣ್ಣದ ಪ್ಯಾಂಟ್, ಕಪ್ಪು ಬಣ್ಣದ ಬೆಲ್ಟ್ ಧರಿಸಿದ್ದಾನೆ. ಮೃತದೇಹದ ಬಳಿ ಕೆಲವು ವಸ್ತುಗಳು ಪತ್ತೆಯಾಗಿದ್ದು, ಅವುಗಳಲ್ಲಿ ಶಿರಸಿಯ ಶ್ರೀ ಮಾರಿಕಾಂಬ ದೇವಸ್ಥಾನದಲ್ಲಿ ನೀಡಿದ ದೇಣಿಗೆಯ ಪಾವತಿ, ಶಿರಸಿಯಿಂದ ಯಲ್ಲಾಪುರಕ್ಕೆ ಪ್ರಯಾಣಿಸಿದ ಬಸ್ ಟಿಕೆಟ್ ಹಾಗೂ ಇತರ ವೈಯಕ್ತಿಕ ವಸ್ತುಗಳು ಸೇರಿವೆ.

ಈ ವ್ಯಕ್ತಿಯ ಗುರುತು ಪತ್ತೆ ಮಾಡಲು ಪೊಲೀಸರು ಸಾರ್ವಜನಿಕರ ಸಹಾಯ ಕೋರಿದ್ದಾರೆ. ಯಾರಿಗಾದರೂ ಈ ಕುರಿತು ಮಾಹಿತಿ ಇದ್ದರೆ ಯಲ್ಲಾಪುರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ.

* ಪೊಲೀಸ್ ನಿರೀಕ್ಷಕರು: 9480805257

* ಪೊಲೀಸ್ ಉಪನಿರೀಕ್ಷಕರು: 9480805273

* ಠಾಣೆ ದೂರವಾಣಿ: 08419-261133

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share