ಅಂಕೋಲಾ: ತಾಲೂಕಿನ ಗಡಿ ಭಾಗವಾದ ಹಳವಳ್ಳಿಯ ಶ್ರೀ ಸಿದ್ಧಿವಿನಾಯಕ ಸಿದ್ದಿ ಕ್ರೀಡಾ-ಸಾಂಸ್ಕ್ರತಿಕ ಸಂಘ ಆದ್ರಳ್ಳಿ ಇವರ ಆಶ್ರಯದಲ್ಲಿ ನಾರಾಯಣ ಮೋಟು ಸಿದ್ದಿ ಸ್ಮರಣಾರ್ಥ ನಾಲ್ಕನೇ ವರ್ಷದ ಯಕ್ಷಗಾನ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.
ಆದ್ರಳ್ಳಿಯ ಮೋಟು ಸಿದ್ದಿ ವೇದಿಕೆಯಲ್ಲಿ ನಡೆದ ಉದ್ಘಾಟನಾ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಶಾಂತಾರಾಮ ಸಿದ್ದಿ ಅಧ್ಯಕ್ಷತೆ ವಹಿಸಿ ಮಾತನಾಡಿ, “ನಮ್ಮ ಸಮಾಜದ ಯುವಕರು ಹಿರಿಯರಾದ ನಾರಾಯಣ ಅವರ ನೆನಪಿಗಾಗಿ ವರ್ಷಂಪ್ರತಿ ಯಕ್ಷಗಾನ ಆಯೋಜಿಸುತ್ತಿರುವುದು ಮಾದರಿಯ ಕಾರ್ಯ. ಇಂತಹ ಕಾರ್ಯಕ್ರಮಗಳು ಮುಂದಿನ ತಲೆಮಾರಿಗೆ ಕಲೆ ಉಳಿಸಲು ಸಹಕಾರಿ” ಎಂದರು.
ಉದ್ಘಾಟಕರಾಗಿ ಭಾಗವಹಿಸಿದ್ದ ಹೈಕೋರ್ಟ್ ನ್ಯಾಯವಾದಿ ಜಯರಾಮ್ ಸಿದ್ದಿ ಮಾತನಾಡಿ, “ನಮ್ಮ ಸಮಾಜ ಶಿಕ್ಷಣದಲ್ಲಿ ಸ್ವಲ್ಪ ಹಿಂದೆ ಇದ್ದರೂ, ಮಕ್ಕಳಿಗೆ ಕಡ್ಡಾಯವಾಗಿ ಉತ್ತಮ ಶಿಕ್ಷಣ ಕಲಿಸುವುದು ಅಗತ್ಯ” ಎಂದು ಹೇಳಿದರು.
ಭಾಸ್ಕರ ಸಿದ್ದಿ ಮಾತನಾಡಿ, ತಮ್ಮಿಂದಾಗುವ ಸಹಕಾರ ಸದಾ ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಡೋಂಗ್ರಿಯ ಮಾಜಿ ಅಧ್ಯಕ್ಷ ವಿನೋದ್ ಭಟ್, ನಾರಾಯಣ ಹೆಗಡೆ ಕಲ್ಲೇಶ್ವರ, ವಿ.ಎಸ್. ಭಟ್ಟ ಕಲ್ಲೇಶ್ವರ, ನಾಗಪ್ಪ ಸಿದ್ದಿ, ನಾಗೇಶ ಸಿದ್ದಿ, ಮಂಜುನಾಥ ಸಿದ್ದಿ, ದಯಾನಂದ ಸಿದ್ದಿ ಸೇರಿದಂತೆ ಹಲವರು ಮಾತನಾಡಿ ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿದರು.
ಕಾರ್ಯಕ್ರಮಕ್ಕೆ ಸಹಕರಿಸಿದ ಮಾಜಿ ಶಾಸಕಿ ರೂಪಾಲಿ ನಾಯ್ಕ, ಗೋಪಾಲಕೃಷ್ಣ ವೈದ್ಯ, ನಿತ್ಯಾನಂದ ಭಟ್ಟ ಹಾಗೂ ದಯಾನಂದ ನಾಯ್ಕ ಅವರನ್ನು ಅಭಿನಂದಿಸಲಾಯಿತು. ಇದೇ ವೇಳೆ ಶಾಂತಾರಾಮ ಸಿದ್ದಿ ಮತ್ತು ಜಯರಾಮ ಸಿದ್ದಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ಶಶಾಂಕ ಹೆಗಡೆ ನಿರ್ವಹಿಸಿದರು. ನಂತರ ಸವಾಲು ಮಕ್ಕಳ ಕಾರ್ಯಕ್ರಮದೊಂದಿಗೆ “ರುಕ್ಮಿಣಿ ವಿವಾಹ” ಮತ್ತು “ಭೀಷ್ಮ ವಿಜಯ” ಯಕ್ಷಗಾನ ಪ್ರದರ್ಶನಗಳು ಸ್ಥಳೀಯ ಸಿದ್ದಿ ಸಮಾಜದ ಕಲಾವಿದರಿಂದ ಮನೋಜ್ಞವಾಗಿ ನಡೆಯಿತು.
ಸಂಘದ ಅಧ್ಯಕ್ಷ ಮಹೇಶ್ ಸಿದ್ದಿ, ಮೋಹನ್ ಸಿದ್ದಿ, ರವಿ ಸಿದ್ದಿ, ರವಿಚಂದ್ರ ಸಿದ್ದಿ, ಸುರೇಶ್ ಸಿದ್ದಿ, ಮಹೇಂದ್ರ ಸಿದ್ದಿ, ರಾಮಕೃಷ್ಣ ಸಿದ್ದಿ, ಸಂತೋಷ ಸಿದ್ದಿ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.