Saturday, May 30, 2026
HomeLocal Newsಚಿನ್ನಾಪುರದಲ್ಲಿ ಯಕ್ಷಗಾನ ಬಯಲಾಟ ಏ.24ಕ್ಕೆ

ಚಿನ್ನಾಪುರದಲ್ಲಿ ಯಕ್ಷಗಾನ ಬಯಲಾಟ ಏ.24ಕ್ಕೆ

ಯಲ್ಲಾಪುರ: ತಾಲೂಕಿನ ಚಿನ್ನಾಪುರ (ಇಡಗುಂದಿ) ಗ್ರಾಮದಲ್ಲಿ ಶ್ರೀ ಚಿನ್ನೇಶ್ವರ ರಾಮಲಿಂಗ ದೇವರ ಹಾಗೂ ಪರಿವಾರ ದೇವರುಗಳ ಪುನರ್‌ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಮತ್ತು ಮಹಾರುದ್ರ ಹವನದ ಅಂಗವಾಗಿ ಏಪ್ರಿಲ್ 24ರಂದು ಶುಕ್ರವಾರ ರಾತ್ರಿ 8:30ರಿಂದ ಭವ್ಯ ಯಕ್ಷಗಾನ ಬಯಲಾಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಯಕ್ಷಶ್ರೀ ಕಲಾಸಂಸ್ಥೆ ಸಂಯೋಜನೆಯಲ್ಲಿ ನಡೆಯಲಿರುವ ಈ ಬಯಲಾಟದಲ್ಲಿ ಕವಿ ಕನ್ಯಾನ ವೆಂಕಟರಮಣ ಭಟ್ ವಿರಚಿತಬ್ರಹ್ಮ ಕಪಾಲ” ಪ್ರಸಂಗ ಪ್ರದರ್ಶನಗೊಳ್ಳಲಿದೆ.

ಹಿಮ್ಮೇಳದಲ್ಲಿ ಭಾಗವತರಾಗಿ ಶಂಕರ ಭಟ್ ಬ್ರಹ್ಮೂರು ಹಾಗೂ ದಿನೇಶ್ ಭಟ್ ಅಬ್ಬಿತೋಟ ಭಾಗವಹಿಸಲಿದ್ದಾರೆ. ಮೃದಂಗದಲ್ಲಿ ಗಣಪತಿ ಭಾಗ್ವತ್ ಕವಾಳೆ ಮತ್ತು ಗಣಪತಿ ಭಟ್ ಬಿಡಾರ, ಚಂಡೆಯಲ್ಲಿ ಗಣೇಶ ಗಾಂಡ್ಕರ್ ಕನಕನಹಳ್ಳಿ ಸೇವೆ ಸಲ್ಲಿಸಲಿದ್ದಾರೆ.

ಮುಮ್ಮೇಳದಲ್ಲಿ ರಾಮಚಂದ್ರ ಹೆಗಡೆ ಕೊಂಡದಕುಳಿ, ತೋಟಿ ಗಣಪತಿ ಹೆಗಡೆ, ಭಾಸ್ಕರ ಗಾಂವ್ಕರ್ ಬಿದ್ರೆಮನೆ, ಮಹಾಬಲೇಶ್ವರ ಭಟ್ ಇಟಗಿ, ನಿರಂಜನ ಜಾಗನಹಳ್ಳಿ, ಅಶ್ವಿನಿ ಕೊಂಡದಕುಳಿ, ನಾಗೇಂದ್ರ ಮೂರೂರು, ಮಂಜುನಾಥ ಗಾಂವ್ಕರ್ ಮೂಲೆಮನೆ ಹಾಗೂ ಆದರ್ಶ ಭಟ್ ಈರಾಪುರ ಭಾಗವಹಿಸಲಿದ್ದಾರೆ.

ಪ್ರಸಾಧನ ವ್ಯವಸ್ಥೆಯನ್ನು ಕವಾಳೆ ಸಹೋದರರು ನಿರ್ವಹಿಸಲಿದ್ದಾರೆ.

ಈ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಆಶೀರ್ವಾದ ಪಡೆಯುವಂತೆ ಶ್ರೀ ಚಿನ್ನೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಸೀಮೆಯ ಸಕಲ ಸದ್ಭಕ್ತರು ಕೋರಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share