Saturday, May 30, 2026
HomeLocal Newsಸಾಧಕ ವಿದ್ಯಾರ್ಥಿನಿ ಸಮೃದ್ಧಿಗೆ ಸನ್ಮಾನ

ಸಾಧಕ ವಿದ್ಯಾರ್ಥಿನಿ ಸಮೃದ್ಧಿಗೆ ಸನ್ಮಾನ

ಯಲ್ಲಾಪುರ: ಎಸ್‌ಎಸ್‌ಎಲ್‌ಸಿ-2026ರ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ನಾಲ್ಕನೇ ಸ್ಥಾನ, ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ ಹಾಗೂ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿರುವ ಬಿಸಗೋಡ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸಮೃದ್ಧಿ ಸಣ್ಣಪ್ಪ ಭಾಗ್ವತ ಅವರನ್ನು ಅಧಿಕಾರಿಗಳು ಹಾಗೂ ಶಿಕ್ಷಕರು ಗೌರವಪೂರ್ವಕವಾಗಿ ಸನ್ಮಾನಿಸಿದರು.

ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ರೇಖಾ ನಾಯ್ಕ್, ನೋಡಲ್ ಅಧಿಕಾರಿ ಪ್ರಕಾಶ್ ತಾರಿಕೊಪ್ಪ ಹಾಗೂ ಶಿಕ್ಷಣ ಸಂಯೋಜಕ ಪ್ರಶಾಂತ್ ಜಿ.ಎನ್ ಅವರು ವಿದ್ಯಾರ್ಥಿನಿಯ ಮನೆಗೆ ತೆರಳಿ ಅಭಿನಂದನೆ ಸಲ್ಲಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಬೀಸಗೋಡ ಸರ್ಕಾರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ನೂತನ ನಾಯಕ್, ಶಿಕ್ಷಕರಾದ ಶ್ರೀಧರ್ ಹೆಗಡೆ, ಸದಾನಂದ ದಬಗಾರ ಮತ್ತು ರವಿಕುಮಾರ್ ಕೆ.ಎನ್ ಅವರು ಕೂಡ ಹಾಜರಿದ್ದು ಶಾಲೆಯ ಪರವಾಗಿ ವಿದ್ಯಾರ್ಥಿನಿಯ ಸಾಧನೆಯನ್ನು ಕೊಂಡಾಡಿ ಗೌರವಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share