Saturday, May 30, 2026
HomeLocal Newsಪೋರಿ ಪ್ರಿಯಕರನೊಂದಿಗೆ ಪರಾರಿ | ರದ್ದಾದ ಮದುವೆ; ಕ್ವಿಂಟಾಲ್‌ಗಟ್ಟಲೆ ಊಟ ವ್ಯರ್ಥ!

ಪೋರಿ ಪ್ರಿಯಕರನೊಂದಿಗೆ ಪರಾರಿ | ರದ್ದಾದ ಮದುವೆ; ಕ್ವಿಂಟಾಲ್‌ಗಟ್ಟಲೆ ಊಟ ವ್ಯರ್ಥ!

ಶಿರಸಿ: ಶಿರಸಿಯಲ್ಲಿ ಮದುವೆಗೆ ಕೆಲವೇ ಗಂಟೆಗಳು ಬಾಕಿ ಇರುವಾಗ ಹಸೆಮಣೆ ಏರಬೇಕಿದ್ದ ವಧು ತನ್ನ ಪ್ರಿಯಕರನೊಂದಿಗೆ ಪರಾರಿಯಾಗಿರುವ ಘಟನೆ ನಡೆದಿದೆ.

ಶಿರಸಿ ಪಟ್ಟಣದ ಮುಸ್ಲಿಂ ಗಲ್ಲಿಯ ನಿವಾಸಿ ಸಿಫಾ (25) ಎಂಬಾಕೆ ತನ್ನ ನಿಶ್ಚಿತ ಮದುವೆಗೆ ಮುನ್ನ ನಾಪತ್ತೆಯಾಗಿದ್ದಾಳೆ. ಮಾಹಿತಿ ಪ್ರಕಾರ, ಸಿಫಾ ಎಂಬಿಬಿಎಸ್‌ ಓದುತ್ತಿರುವ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಆದರೆ ಈ ಸಂಬಂಧವನ್ನು ಕುಟುಂಬದವರು ಒಪ್ಪದ ಕಾರಣ ಶಿರಸಿಯ ಅಬ್ರಾರ್ ಎಂಬಾತನೊಂದಿಗೆ ಮದುವೆ ನಿಶ್ಚಯಿಸಲಾಗಿತ್ತು.

ಶನಿವಾರ ಬೆಳಿಗ್ಗೆ ಶಿರಸಿಯ ಕಲ್ಯಾಣ ಮಂಟಪದಲ್ಲಿ ಮದುವೆ ನಡೆಯಬೇಕಾಗಿತ್ತು. ಮದುವೆ ಸಿದ್ಧತೆಗಳು ಜೋರಾಗಿ ನಡೆಯುತ್ತಿದ್ದ ವೇಳೆ ಸಿಫಾ ಬೆಳ್ಳಂಬೆಳಿಗ್ಗೆ ತನ್ನ ಪ್ರಿಯಕರನೊಂದಿಗೆ ಮನೆಬಿಟ್ಟು ತೆರಳಿದ್ದಾಳೆ ಎನ್ನಲಾಗಿದೆ. ಈ ಘಟನೆ ಕುಟುಂಬದವರಲ್ಲಿ ಆಘಾತ ಮೂಡಿಸಿದೆ.

ಮದುವೆಗೆಂದು ಕ್ವಿಂಟಲ್‌ಗಟ್ಟಲೆ ಮಟನ್ ಹಾಗೂ ಚಿಕನ್ ಸಿದ್ಧಪಡಿಸಲಾಗಿತ್ತು. ಆದರೆ ಮದುವೆ ರದ್ದಾದ ಹಿನ್ನೆಲೆ ಅವೆಲ್ಲವೂ ವ್ಯರ್ಥವಾಗಿವೆ ಎಂದು ತಿಳಿದುಬಂದಿದೆ.

ಸಿಫಾ ಅವರ ತಂದೆ ಝಹೀರ್ ಖಾನ್ ಅವರು ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಯುವತಿಯನ್ನು ಪತ್ತೆಹಚ್ಚುವ ಕಾರ್ಯಾಚರಣೆ ಆರಂಭಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share