ಮಾನವೀಯತೆ ಅಕ್ಷಯವಾಗಲಿ; ಈ ಮನೆಯ ದೀಪ ಬೆಳಗಲಿ
ಮನುಷ್ಯನ ಬದುಕೇ ಹಾಗೆ. ಒಂದು ವೇಗದಲ್ಲಿ ಸಾಗುತ್ತಿದ್ದರೆ ಬದುಕು ಚಂದವೇ. ಸಾಮಾನ್ಯ ಏರಿಳಿತಗಳನ್ನೂ ಸಹಿಸಿ ಮುನ್ನಡೆಯಬಹುದು. ಆದರೆ, ಕುಟುಂಬದ ಸದಸ್ಯರಲ್ಲಿ ಅನಾರೋಗ್ಯ ಕಾಣಿಸಿಕೊಂಡರೆ ದಿನಚರಿ ಏರುಪೇರಾಗಿಬಿಡುತ್ತದೆ.
ಅದರಲ್ಲೂ, ಮನೆ ತುಂಬ ಓಡಾಡಿಕೊಂಡು ಉತ್ಸಾಹದ ಬುಗ್ಗೆಯಂತಿದ್ದ ಹೆಣ್ಣುಮಗಳೊಬ್ಬಳಿಗೆ ಅನಾರೋಗ್ಯ ಕಾಡಿದರೆ ಆ ಹಿಂಸೆಯನ್ನು ಯಾರಿಂದಲೂ ಸಹಿಸಲು ಸಾಧ್ಯವಿಲ್ಲ.
ಅಂಥಹದ್ದೊಂದು ಸಂದಿಗ್ಧ ಪರಿಸ್ಥಿತಿಯಲ್ಲಿ ಯಲ್ಲಾಪುರ ತಾಲೂಕಿನ ಗುರ್ತೆಗದ್ದೆಯ ನಿವಾಸಿಗಳಾದ ವಿಘ್ನೇಶ್ವರ ಭಟ್ಟ ಹಾಗೂ ಉಷಾ ಭಟ್ಟ ದಂಪತಿಗಳಿದ್ದಾರೆ. ಇವರ ಪುತ್ರಿ ಸಂಪದಾ ಭಟ್ಟ (15) ಗಂಭೀರವಾದ ಥಲಸೇಮಿಯಾ ಮೇಜರ್ (Thalassemia Major) ಕಾಯಿಲೆಯಿಂದ ಬಳಲುತ್ತಿದ್ದು, ಸಾವು-ಬದುಕಿನ ಹೋರಾಟದಲ್ಲಿದ್ದಾಳೆ.
ಕೆಳ ಮಧ್ಯಮ ವರ್ಗದ ಈ ಕುಟುಂಬ ಇಂದು ಮುದ್ದು ಮಗಳ ಪ್ರಾಣ ಉಳಿಸಲು ಸಮಾಜದ ನೆರವಿಗಾಗಿ ಕೈಚಾಚುವ ಪರಿಸ್ಥಿತಿಯಲ್ಲಿದೆ. ಸಂಪದಾ ಸಾಮಾನ್ಯ ಬಾಲಕಿಯರಂತೆ ಕನಸು ಕಾಣಬೇಕಾದ ವಯಸ್ಸಿನಲ್ಲಿ ಆಸ್ಪತ್ರೆ, ಚಿಕಿತ್ಸೆ ಮತ್ತು ರಕ್ತದಾನದ ನಡುವೆ ಜೀವನ ಸಾಗಿಸುತ್ತಿದ್ದಾಳೆ.
ವೈದ್ಯರ ಸಲಹೆಯಂತೆ ಇದೀಗ ಅವಳಿಗೆ ಶಾಶ್ವತ ಪರಿಹಾರವಾಗಿ ಬೆಂಗಳೂರಿನ ಎಮ್.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಅಸ್ತಿಮಜ್ಜೆ ಕಸಿ ಮಾಡಲು ನಿರ್ಧರಿಸಿದ್ದು, ಈ ಚಿಕಿತ್ಸೆಗೆ ಸುಮಾರು 27,75,000 ರೂ. ವೆಚ್ಚವಾಗಲಿದೆ. ಇದು ಬಡ ಕುಟುಂಬ ತಮ್ಮ ಕುಡಿಯನ್ನು ಉಳಿಸಿಕೊಳ್ಳಲು ಭರಿಸಲು ಅಸಾಧ್ಯವಾದ ಮೊತ್ತ.
ಒಬ್ಬ ತಂದೆ-ತಾಯಿ ತಮ್ಮ ಮಗಳ ಜೀವ ಉಳಿಸಿಕೊಳ್ಳಲು ಸಮಾಜದ ಮುಂದೆ ಸಹಾಯ ಕೇಳುವ ಸ್ಥಿತಿ ಎಷ್ಟು ನೋವಿನದ್ದೆಂದು ಊಹಿಸಲೂ ಸಾಧ್ಯವಿಲ್ಲ. ಈ ಹೆಣ್ಣು ಮಗಳು ಮೊದಲಿನಂತಾಗಬೇಕು ಎನ್ನುವ ಹಂಬಲದಿಂದ ಕೆನರಾ ನೆಕ್ಸ್ಟ್ ಹೀಗೊಂದು ಕಾರ್ಯಕ್ಕೆ ಮುಂದಾಗಿದೆ.
ಸಂಪದಾಳ ಬದುಕಿಗೆ ನಿಮ್ಮ ಸಣ್ಣ ಸಹಾಯವೂ ದೊಡ್ಡ ಆಶಾಕಿರಣವಾಗಬಹುದು. ಸಮಾಜದ ದಾನಿಗಳು, ಸಂಘ-ಸಂಸ್ಥೆಗಳು, ಸ್ನೇಹಿತರು ಹಾಗೂ ಮಾನವೀಯ ಮನಸ್ಸಿನವರು ಈ ಕುಟುಂಬದ ನೆರವಿಗೆ ಬರುವಿರಾ? ಸಂಪದಾ ಮತ್ತೆ ಆರೋಗ್ಯವಾಗಿಯೂ ಸಂತೋಷವಾಗಿಯೂ ಬದುಕುವ ದಿನ ಬರಲಿ ಎಂಬ ಆಶಯದೊಂದಿಗೆ ಎಲ್ಲರೂ ಸಹಾಯ ಹಸ್ತ ಚಾಚೋಣ.
ನೀವೂ ನೆರವಾಗಬಹುದು:
ಈ ಮಾನವೀಯ ಕಾರ್ಯಕ್ಕೆ ಕೆನರಾ ನೆಕ್ಸ್ಟ್ ಒಂದು ಸೇತುವೆಯಷ್ಟೇ. ಯಾರೂ ಕೂಡ ನೇರವಾಗಿ ನಮಗೆ ನೆರವಿನ ಹಣ ಸಂದಾಯ ಮಾಡುವಂತಿಲ್ಲ. ಕೆಳಗೆ ನೀಡಿರುವ ಮಗುವಿನ ಪಾಲಕರ ಬ್ಯಾಂಕ್ ಖಾತೆಗೆ ಅಥವಾ ಯುಪಿಐ ಮೂಲಕ ನಿಮ್ಮ ಕೈಲಾದ ನೆರವು ನೀಡಿ.
ಈ ಮನವಿಯ ಮೂಲಕ ನೀವು ಅವರಿಗೆ ಹಣ ಸಂದಾಯ ಮಾಡಿದ (ಎಷ್ಟೇ ಸಣ್ಣ ಮೊತ್ತವಾಗಿರಲಿ) screenShot ನಿಮ್ಮ ಹೆಸರು ಮತ್ತು ವಿಳಾಸದೊಂದಿಗೆ ನಮಗೆ (8970741424) ಕಳುಹಿಸಿ. ನಾಳೆ ಅಂದರೆ ಮೇ 9ರಿಂದ ಪ್ರತಿದಿನ ರಾತ್ರಿ 8 ಗಂಟೆಗೆ ಆಯಾ ದಿನ ಕೆನರಾ ನೆಕ್ಸ್ಟ್ ಮೂಲಕ ಸಂಗ್ರಹವಾದ ಮೊತ್ತ ಹಾಗೂ ನೆರವಾದ ಮಹನೀಯರ ವಿವರಗಳನ್ನು ನಮ್ಮ ವಾಟ್ಸಪ್ ಗ್ರೂಪ್ನಲ್ಲಿ ನಿಮ್ಮೆದುರು ಇಡುತ್ತೇವೆ.
ನೀವು ಯಾವುದಾದರೂ ಸಂಘ-ಸಂಸ್ಥೆ, ಗೃಹೋದ್ಯಮ, ವ್ಯಾಪಾರ-ವಹಿವಾಟು ನಡೆಸುತ್ತಿದ್ದವರಾದರೆ, ತಮ್ಮ ಉದ್ಯಮದ ಕುರಿತಾದ ಜಾಹೀರಾತನ್ನು ಉಚಿತವಾಗಿ ಪ್ರಕಟಿಸಿ (ಒಂದು ಬಾರಿ ಮಾತ್ರ) ನಿಮ್ಮ ಉದ್ಯಮವನ್ನು ನಾವು ಬೆಂಬಲಿಸುತ್ತೇವೆ.
ಹಣವನ್ನು ಸಂದಾಯ ಮಾಡಬೇಕಾದ ವಿವರ ಇಲ್ಲಿದೆ:
ಉಷಾ ವಿಘ್ನೇಶ್ವರ ಭಟ್ಟ.
A/c No: 520101070759630
IFSC Code: UBIN0920908
Google Pay No : 7019701306