ಜೋಯಿಡಾ: ತಾಲೂಕಿನ ರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯ ಅನಮೋಡ ಗ್ರಾಮದಲ್ಲಿ ಅನಧಿಕೃತವಾಗಿ ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟಿದ್ದ ಆರೋಪದಡಿ ಚಹಾ ಅಂಗಡಿ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಸಂಬಂಧ ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅನಮೋಡ ನಿವಾಸಿ ಸುರೇಶ ಮರ್ತೋ ನಾಯ್ಕ (48) ಆರೋಪಿಯಾಗಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಆರೋಪಿ ತನ್ನ ಚಹಾ ಅಂಗಡಿಯಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಸಾರ್ವಜನಿಕರಿಗೆ ಮುಕ್ತವಾಗಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾನೆ. ಮೇ 18ರಂದು ಬೆಳಿಗ್ಗೆ 11.40ರ ಸುಮಾರಿಗೆ ಪಿ.ಎಸ್.ಐ ಮಹಂತೇಶ ಯು. ನಾಯಕ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದ ವೇಳೆ ಅಂಗಡಿಯಲ್ಲಿ ಮದ್ಯ ಸೇವನೆ ನಡೆಯುತ್ತಿರುವುದು ಪತ್ತೆಯಾಗಿದೆ.
ದಾಳಿ ವೇಳೆ 90 ಮಿ.ಲೀ ಸಾಮರ್ಥ್ಯದ ಮದ್ಯ ತುಂಬಿದ ಎರಡು ಟೆಟ್ರಾ ಪೌಚ್‌ಗಳು, ಎರಡು ಖಾಲಿ ಟೆಟ್ರಾ ಪೌಚ್‌ಗಳು ಹಾಗೂ ಎರಡು ಪ್ಲಾಸ್ಟಿಕ್ ಗ್ಲಾಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕುರಿತು ಪಿ.ಎಸ್.ಐ ನೀಡಿದ ಸರ್ಕಾರಿ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.