Monday, September 7, 2026
Join WhatsApp Group
HomeCrimeಜಾನುವಾರುಗಳ ಅಮಾನವೀಯ ಸಾಗಾಟ: ಮೂವರ ವಿರುದ್ಧ ಪ್ರಕರಣ

ಜಾನುವಾರುಗಳ ಅಮಾನವೀಯ ಸಾಗಾಟ: ಮೂವರ ವಿರುದ್ಧ ಪ್ರಕರಣ

ಮುಂಡಗೋಡ: ಜಾನುವಾರುಗಳನ್ನು ಕ್ರೂರವಾಗಿ ಹಾಗೂ ನಿಯಮ ಉಲ್ಲಂಘಿಸಿ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ಆರೋಪದಡಿ ಮೂವರ ವಿರುದ್ಧ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂನ್ 10ರಂದು ಬೆಳಿಗ್ಗೆ 7.30ರ ಸುಮಾರಿಗೆ ಮಹೀಂದ್ರಾ ಸುಪ್ರೋ ವಾಹನದಲ್ಲಿ ಮೂರು ಜಾನುವಾರುಗಳನ್ನು ತುಂಬಿಕೊಂಡು ಸಾಗಾಟ ಮಾಡಲಾಗುತ್ತಿತ್ತು. ಜಾನುವಾರುಗಳಿಗೆ ನಿಲ್ಲಲು ಅಥವಾ ಮಲಗಲು ಅಗತ್ಯ ಸ್ಥಳಾವಕಾಶ ಕಲ್ಪಿಸದೆ, ಮೇವು ಹಾಗೂ ನೀರಿನ ವ್ಯವಸ್ಥೆಯೂ ಇಲ್ಲದೆ ಅವುಗಳನ್ನು ಒಂದಕ್ಕೊಂದು ಒತ್ತಿಕೊಂಡ ಸ್ಥಿತಿಯಲ್ಲಿ ಸಾಗಿಸಲಾಗುತ್ತಿತ್ತು.

ವಾಹನದಲ್ಲಿ ಒಂದು ಕೆಂಪು ಬಣ್ಣದ ಹೊರಿ ಕರು, ಒಂದು ಬಿಳಿ ಬಣ್ಣದ ಹೊರಿ ಕರು ಹಾಗೂ ಒಂದು ಕೆಂಪು ಬಣ್ಣದ ಆಕಳು ಕರು ಸೇರಿದಂತೆ ಒಟ್ಟು ಮೂರು ಜಾನುವಾರುಗಳನ್ನು ಸಾಗಿಸಲಾಗುತ್ತಿತ್ತು. ಇವುಗಳ ಒಟ್ಟು ಮೌಲ್ಯ ಸುಮಾರು ₹10 ಸಾವಿರ ಎಂದು ಅಂದಾಜಿಸಲಾಗಿದೆ.

ಈ ಸಂಬಂಧ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಚಿಕ್ಕಕೌಂಶಿ ಹೊಸೂರಿನ ನಿವಾಸಿ ಇಮ್ಮುಸಾಬ್ ಕಲಂದರಸಾಬ್ ಬೆಫಾರಿ (34), ಮಂತಗಿ ಗ್ರಾಮದ ಹನಮಂತಪ್ಪ ಸಹದೇವಪ್ಪ ತೋಟದ (35) ಹಾಗೂ ನಾಗರಾಜ ಬಸಪ್ಪ ತೆಂಗಿನವರ (32) ವಿರುದ್ಧ ಪ್ರಕರಣ ದಾಖಲಾಗಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share