ಕಾರವಾರ: ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ–2026 (Special Intensive Revision–2026) ಪ್ರಕ್ರಿಯೆಯಲ್ಲಿ ಉತ್ತರ ಕನ್ನಡ ಜಿಲ್ಲೆ ಗಮನಾರ್ಹ ಸಾಧನೆ ಮಾಡಿದ್ದು, ಎನ್ಯುಮರೇಷನ್ ಫಾರ್ಮ್ ವಿತರಣೆಯಲ್ಲಿ ರಾಜ್ಯದಲ್ಲೇ ಮೂರನೇ ಸ್ಥಾನ ಪಡೆದಿದೆ.
ಜಿಲ್ಲೆಯಲ್ಲಿ ಒಟ್ಟು 12,30,037 ಮತದಾರರ ಪೈಕಿ ಇದುವರೆಗೆ 11,91,548 ಎನ್ಯುಮರೇಷನ್ ಫಾರ್ಮ್‌ಗಳನ್ನು ವಿತರಿಸಲಾಗಿದ್ದು, ಶೇ.96.87ರಷ್ಟು ಸಾಧನೆ ದಾಖಲಿಸಲಾಗಿದೆ. ಈಗಾಗಲೇ 11,58,776 ಮತದಾರರ ಮ್ಯಾಪಿಂಗ್ ಪೂರ್ಣಗೊಂಡಿದ್ದು, 59,123 ಫಾರ್ಮ್‌ಗಳನ್ನು ಗಣಕೀಕರಣ ಮಾಡಲಾಗಿದೆ.
ವಿಧಾನಸಭಾ ಕ್ಷೇತ್ರವಾರು ಪ್ರಗತಿ ಹೀಗಿದೆ:
- ಹಳಿಯಾಳ: 1,87,543 ಮತದಾರರ ಪೈಕಿ 1,73,750 ಫಾರ್ಮ್ ವಿತರಣೆ, 14,375 ಫಾರ್ಮ್ ಗಣಕೀಕರಣ.
- ಕಾರವಾರ: 2,23,390 ಮತದಾರರ ಪೈಕಿ 2,22,950 ಫಾರ್ಮ್ ವಿತರಣೆ, 9,024 ಗಣಕೀಕರಣ.
- ಕುಮಟಾ: 1,92,055 ಮತದಾರರ ಪೈಕಿ 1,92,054 ಫಾರ್ಮ್ ವಿತರಣೆ, 15,078 ಗಣಕೀಕರಣ.
- ಭಟ್ಕಳ: 2,31,778 ಮತದಾರರ ಪೈಕಿ 2,23,064 ಫಾರ್ಮ್ ವಿತರಣೆ, 8,670 ಗಣಕೀಕರಣ.
- ಶಿರಸಿ: 2,05,743 ಮತದಾರರ ಪೈಕಿ 1,95,617 ಫಾರ್ಮ್ ವಿತರಣೆ, 5,175 ಗಣಕೀಕರಣ.
- ಯಲ್ಲಾಪುರ: 1,89,528 ಮತದಾರರ ಪೈಕಿ 1,84,113 ಫಾರ್ಮ್ ವಿತರಣೆ, 6,801 ಗಣಕೀಕರಣ.
ವಿಶೇಷವೆಂದರೆ, ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಎನ್ಯುಮರೇಷನ್ ಫಾರ್ಮ್ ವಿತರಣೆ ಶೇ.100ರಷ್ಟು ಪೂರ್ಣಗೊಂಡಿದ್ದು, ರಾಜ್ಯ ಮಟ್ಟದಲ್ಲಿ ಮೂರನೇ ಸ್ಥಾನ ಪಡೆದಿದೆ.
ಮನೆ-ಮನೆ ಭೇಟಿ ವೇಳೆ ಜಿಲ್ಲೆಯಲ್ಲಿ ಒಟ್ಟು 1,092 ಮತದಾರರನ್ನು ವಿಶೇಷವಾಗಿ ಗುರುತಿಸಲಾಗಿದೆ. ಇವರಲ್ಲಿ 149 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡವರು, 868 ಮಂದಿ ಮೃತಪಟ್ಟವರು ಹಾಗೂ 70 ದ್ವಿಪ್ರತಿ (ಡ್ಯುಪ್ಲಿಕೇಟ್) ಮತದಾರರು ಸೇರಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.