Friday, July 24, 2026
Join WhatsApp Group
HomeLocal NewsSIR; ಎನ್ಯುಮರೇಷನ್ ಫಾರ್ಮ್ ವಿತರಣೆಯಲ್ಲಿ ಜಿಲ್ಲೆಗೆ 3ನೇ ಸ್ಥಾನ

SIR; ಎನ್ಯುಮರೇಷನ್ ಫಾರ್ಮ್ ವಿತರಣೆಯಲ್ಲಿ ಜಿಲ್ಲೆಗೆ 3ನೇ ಸ್ಥಾನ

ಕಾರವಾರ: ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ–2026 (Special Intensive Revision–2026) ಪ್ರಕ್ರಿಯೆಯಲ್ಲಿ ಉತ್ತರ ಕನ್ನಡ ಜಿಲ್ಲೆ ಗಮನಾರ್ಹ ಸಾಧನೆ ಮಾಡಿದ್ದು, ಎನ್ಯುಮರೇಷನ್ ಫಾರ್ಮ್ ವಿತರಣೆಯಲ್ಲಿ ರಾಜ್ಯದಲ್ಲೇ ಮೂರನೇ ಸ್ಥಾನ ಪಡೆದಿದೆ.

ಜಿಲ್ಲೆಯಲ್ಲಿ ಒಟ್ಟು 12,30,037 ಮತದಾರರ ಪೈಕಿ ಇದುವರೆಗೆ 11,91,548 ಎನ್ಯುಮರೇಷನ್ ಫಾರ್ಮ್‌ಗಳನ್ನು ವಿತರಿಸಲಾಗಿದ್ದು, ಶೇ.96.87ರಷ್ಟು ಸಾಧನೆ ದಾಖಲಿಸಲಾಗಿದೆ. ಈಗಾಗಲೇ 11,58,776 ಮತದಾರರ ಮ್ಯಾಪಿಂಗ್ ಪೂರ್ಣಗೊಂಡಿದ್ದು, 59,123 ಫಾರ್ಮ್‌ಗಳನ್ನು ಗಣಕೀಕರಣ ಮಾಡಲಾಗಿದೆ.

ವಿಧಾನಸಭಾ ಕ್ಷೇತ್ರವಾರು ಪ್ರಗತಿ ಹೀಗಿದೆ:

  • ಹಳಿಯಾಳ: 1,87,543 ಮತದಾರರ ಪೈಕಿ 1,73,750 ಫಾರ್ಮ್ ವಿತರಣೆ, 14,375 ಫಾರ್ಮ್ ಗಣಕೀಕರಣ.
  • ಕಾರವಾರ: 2,23,390 ಮತದಾರರ ಪೈಕಿ 2,22,950 ಫಾರ್ಮ್ ವಿತರಣೆ, 9,024 ಗಣಕೀಕರಣ.
  • ಕುಮಟಾ: 1,92,055 ಮತದಾರರ ಪೈಕಿ 1,92,054 ಫಾರ್ಮ್ ವಿತರಣೆ, 15,078 ಗಣಕೀಕರಣ.
  • ಭಟ್ಕಳ: 2,31,778 ಮತದಾರರ ಪೈಕಿ 2,23,064 ಫಾರ್ಮ್ ವಿತರಣೆ, 8,670 ಗಣಕೀಕರಣ.
  • ಶಿರಸಿ: 2,05,743 ಮತದಾರರ ಪೈಕಿ 1,95,617 ಫಾರ್ಮ್ ವಿತರಣೆ, 5,175 ಗಣಕೀಕರಣ.
  • ಯಲ್ಲಾಪುರ: 1,89,528 ಮತದಾರರ ಪೈಕಿ 1,84,113 ಫಾರ್ಮ್ ವಿತರಣೆ, 6,801 ಗಣಕೀಕರಣ.

ವಿಶೇಷವೆಂದರೆ, ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಎನ್ಯುಮರೇಷನ್ ಫಾರ್ಮ್ ವಿತರಣೆ ಶೇ.100ರಷ್ಟು ಪೂರ್ಣಗೊಂಡಿದ್ದು, ರಾಜ್ಯ ಮಟ್ಟದಲ್ಲಿ ಮೂರನೇ ಸ್ಥಾನ ಪಡೆದಿದೆ.

ಮನೆ-ಮನೆ ಭೇಟಿ ವೇಳೆ ಜಿಲ್ಲೆಯಲ್ಲಿ ಒಟ್ಟು 1,092 ಮತದಾರರನ್ನು ವಿಶೇಷವಾಗಿ ಗುರುತಿಸಲಾಗಿದೆ. ಇವರಲ್ಲಿ 149 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡವರು, 868 ಮಂದಿ ಮೃತಪಟ್ಟವರು ಹಾಗೂ 70 ದ್ವಿಪ್ರತಿ (ಡ್ಯುಪ್ಲಿಕೇಟ್) ಮತದಾರರು ಸೇರಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share