Friday, July 24, 2026
Join WhatsApp Group
HomeCrimeಅಮಲಿನಲ್ಲಿ ಅನಾಹುತ; ಸರಣಿ ಅಪಘಾತ

ಅಮಲಿನಲ್ಲಿ ಅನಾಹುತ; ಸರಣಿ ಅಪಘಾತ

ಕಾರವಾರ: ಮದ್ಯದ ಅಮಲಿನಲ್ಲಿ ನಿರ್ಲಕ್ಷ್ಯದಿಂದ ಕಾರು ಚಲಾಯಿಸಿದ ಚಾಲಕನೊಬ್ಬ ರಿವರ್ಸ್‌ನಲ್ಲಿ ವಾಹನ ಚಲಾಯಿಸಿ ಸರಣಿ ಅಪಘಾತಕ್ಕೆ ಕಾರಣವಾದ ಘಟನೆ ಕಾರವಾರ ನಗರದಲ್ಲಿ ಭಾನುವಾರ (ಜು. 19) ನಡೆದಿದೆ.

ಘಟನೆಯಲ್ಲಿ ತರಕಾರಿ ವ್ಯಾಪಾರಿಯೊಬ್ಬರಿಗೆ ಗಾಯಗಳಾಗಿದ್ದು, ಕಾರುಗಳು ಕೂಡ ಹಾನಿಗೊಳಗಾಗಿವೆ.ಬಾಡದ ಸೋನಾರವಾಡ ನಿವಾಸಿ, 45 ವರ್ಷದ ವಸಂತ ಕೆರಿಯಪ್ಪ ಶೇಟ ಎಂಬಾತ ಮದ್ಯಪಾನದ ಅಮಲಿನಲ್ಲಿ ಕಾರು ಚಲಾಯಿಸುತ್ತಿದ್ದ.

ಗಿಂಡಿವಾಡ ಸರ್ಕಾರಿ ಶಾಲೆ ಸಮೀಪ ತನ್ನ ಕಾರನ್ನು ಏಕಾಏಕಿ ತಿರುಗಿಸಿ, ವೇಗವಾಗಿ ರಿವರ್ಸ್‌ನಲ್ಲಿ ಚಲಾಯಿಸಿದ ವೇಳೆ ಸಾಯಿನಗರ ಮಾರ್ಗದಲ್ಲಿ ನಿಂತಿದ್ದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಆ ಕಾರು ಜಖಂಗೊಂಡಿದೆ.

ಅದಾದ ಬಳಿಕವೂ ಕಾರು ನಿಲ್ಲಿಸದೇ ಮುಂದುವರಿದ ಚಾಲಕ, ಕಾರವಾರದ ಶಿವಾಜಿ ಸರ್ಕಲ್ ಬಳಿ ರಸ್ತೆ ಬದಿಯಲ್ಲಿ ನಿಂತಿದ್ದ 108 ಆಂಬುಲೆನ್ಸ್‌ಗೆ ರಿವರ್ಸ್‌ನಲ್ಲಿ ಡಿಕ್ಕಿ ಹೊಡೆದಿದ್ದಾನೆ. ಬಳಿಕ ಅಲ್ಲೇ ತರಕಾರಿ ಮಾರಾಟ ಮಾಡುತ್ತಿದ್ದ ಅಮದಳ್ಳಿ ನಿವಾಸಿ ಪ್ರಮೀಳಾ ಪಾಂಡುರಂಗ ತಳೇಕರ (67) ಅವರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಎಡ ಕಾಲಿನ ಪಾದ ಹಾಗೂ ಎಡ ಭುಜಕ್ಕೆ ಗಾಯಗಳಾಗಿವೆ.

ಘಟನೆಯಲ್ಲಿ ಆರೋಪಿ ಚಲಾಯಿಸುತ್ತಿದ್ದ ಕಾರಿಗೂ ಹಾನಿಯಾಗಿದೆ. ಈ ಸಂಬಂಧ ಕಾರವಾರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share