ಕಾರವಾರ: ಕನ್ನಡ ಪುಸ್ತಕ ಪ್ರಾಧಿಕಾರದ ಮಹತ್ವಕಾಂಕ್ಷೆಯ ಕಾರ್ಯಕ್ರಮವಾದ ʻಮನೆಗೊಂದು ಗ್ರಂಥಾಲಯʼ ಕಾರ್ಯಕ್ರಮವನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗಿದ್ದು, ಜಿಲ್ಲೆಯ ಸಂಚಾಲಕರಾಗಿ ಅಂಕೋಲಾದ ಕೃಷ್ಣ ನಾಯಕ ಹಿಚಕಡ ಅವರನ್ನು ಆಯ್ಕೆ ಮಾಡಲಾಗಿದೆ.
ಜಾಗೃತಿ ಸಮಿತಿಯ ಸದಸ್ಯರನ್ನಾಗಿ ಬಿ.ಎನ್. ವಾಸರೆ ದಾಂಡೇಲಿ, ಸಿಂಧುಚಂದ್ರ ಹೆಗಡೆ ಶಿರಸಿ, ಪಿ.ಆರ್. ನಾಯ್ಕ ಕುಮಟಾ, ಶಂಭು ಹೆಗಡೆ ಭಟ್ಕಳ, ಸಣ್ಣಪ್ಪ ಭಾಗ್ವತ ಯಲ್ಲಾಪುರ, ಭಿಮಾಶಂಕರ ಅಜನಾಳ ಜೋಯಿಡಾ, ಯಮುನಾ ಗಾಂವಕರ್ ಕಾರವಾರ, ಬಸವರಾಜ ಓಶಿಮಠ ಮುಂಡಗೋಡ, ಜಿ.ಡಿ. ಗಂಗಾಧರ ಹಳಿಯಾಳ, ಆರ್.ಜಿ. ನಾಯ್ಕ ಸಿದ್ದಾಪುರ, ಎಚ್.ಎಸ್. ಗುನಗಾ ಹೊನ್ನಾವರ, ಸುಕನ್ಯಾ ದೇಸಾಯಿ ಜೋಯಿಡಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.