Monday, September 7, 2026
Join WhatsApp Group
HomeLocal Newsಗದ್ದೆಗೆ ನುಗ್ಗಿದ ಹೆಬ್ಬಾವು; ಸುರಕ್ಷಿತ ರಕ್ಷಣೆ

ಗದ್ದೆಗೆ ನುಗ್ಗಿದ ಹೆಬ್ಬಾವು; ಸುರಕ್ಷಿತ ರಕ್ಷಣೆ

ಮುಂಡಗೋಡ: ತಾಲೂಕಿನ ಕಾತೂರು ವಲಯದ ಪಾಳಾ ಶಾಖೆಯ ಕೊಡಂಬಿ ಗ್ರಾಮದಲ್ಲಿ ರೈತ ಬಸವರಾಜ್ ಬೈಲಪ್ಪ ಬಸ್ಸೆಟ್ಟರ್ ಅವರ ಗದ್ದೆಯಲ್ಲಿ ಹೆಬ್ಬಾವು ಕಾಣಿಸಿಕೊಂಡು ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಈ ಬಗ್ಗೆ ಗ್ರಾಮಸ್ಥ ಕೃಷ್ಣ ಕ್ಯಾರಕಟ್ಟಿ ಅವರು ದೂರವಾಣಿ ಮೂಲಕ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ನಾಮಾ ಉಪವಲಯ ಅರಣ್ಯಾಧಿಕಾರಿ, ಉರಗ ರಕ್ಷಕ ಸುನೀಲ್ ಹೊನ್ನಾವರ ಸ್ಥಳಕ್ಕೆ ಧಾವಿಸಿ, ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿನಲ್ಲಿ ಬಿಟ್ಟರು.

ಕಾರ್ಯಾಚರಣೆಯಲ್ಲಿ ಕೃಷ್ಣ ಕ್ಯಾರಕಟ್ಟಿ, ಸಲೀಮ್ ಯಾವಗಲ್, ಶ್ರೀಧರ್ ಗುತ್ತಲ, ಪಕ್ಕಿರೇಶ್ ಪೂಜಾರ್ ಹಾಗೂ ಅಶೋಕ್ ತೋಟಗೇರಿ ಸಹಕರಿಸಿದರು.
ಈ ವೇಳೆ, “ಹಾವಿನ ಬಗ್ಗೆ ಅನಗತ್ಯ ಭಯ ಬೇಡ, ಆದರೆ ಅಗತ್ಯ ಜಾಗ್ರತೆ ಇರಲಿ. ಹಾವು ಕಂಡರೆ ಕೊಲ್ಲುವ ಬದಲು ತಕ್ಷಣ ಹಾವು ರಕ್ಷಕರಿಗೆ ಮಾಹಿತಿ ನೀಡಿ,” ಎಂದು ಸಾರ್ವಜನಿಕರಿಗೆ ಮನವಿ ಮಾಡಲಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share