ಯಲ್ಲಾಪುರದಲ್ಲಿ ಪೊಲೀಸ್ ದಾಳಿ; ಅಬಕಾರಿ ಪ್ರಕರಣ ದಾಖಲು
ಯಲ್ಲಾಪುರ: ಯಾವುದೇ ಪರವಾನಗಿ ಇಲ್ಲದೆ ಅಂಗಡಿಯಲ್ಲೇ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಕಲ್ಪಿಸುತ್ತಿದ್ದ ಆರೋಪದ ಮೇಲೆ ಯಲ್ಲಾಪುರ ಪೊಲೀಸರು ದಾಳಿ ನಡೆಸಿ ವ್ಯಕ್ತಿಯೊಬ್ಬನ ವಿರುದ್ಧ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಆಗಸ್ಟ್ 4ರಂದು ಸಂಜೆ 6 ಗಂಟೆ ಸುಮಾರಿಗೆ ಯಲ್ಲಾಪುರ ಪಟ್ಟಣದ ಕಾಳಮ್ಮನಗರ ಗಂಗಾಧರ ತೋಟದ ಸಮೀಪದ ಆಶ್ರಯ ಕಾಲೋನಿಯಲ್ಲಿರುವ ಅಂಗಡಿಯಲ್ಲಿ ಪ್ರಭಾಕರ ರಾಜು ಸಿದ್ದಿ (33) ಎಂಬಾತ ಅಕ್ರಮವಾಗಿ ಸಾರ್ವಜನಿಕರಿಗೆ ಸರಾಯಿ ಸೇವಿಸಲು ಅವಕಾಶ ಮಾಡಿಕೊಡುತ್ತಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸ್ ಉಪನಿರೀಕ್ಷಕ ಮಹಾವೀರ ಕಾಂಬಳೆ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ದಾಳಿಯ ವೇಳೆ ಅಂಗಡಿಯಿಂದ 90 ಎಂಎಲ್‌ನ ಎರಡು ಸರಾಯಿ ಪೌಚ್‌ಗಳು, ಎರಡು ಖಾಲಿ ಸರಾಯಿ ಪೌಚ್‌ಗಳು, ಒಂದು ಸ್ಟೀಲ್ ಗ್ಲಾಸ್ ಹಾಗೂ 500 ಎಂಎಲ್‌ನ ಖಾಲಿ ನೀರಿನ ಬಾಟಲಿ ವಶಪಡಿಸಿಕೊಳ್ಳಲಾಗಿದೆ.