ಹೊನ್ನಾವರ: ಮಂಕಿ ಗ್ರಾಮದ ನಿವಾಸಿಗಳಾದ 31 ವರ್ಷದ ಫಾತಿಮಾ ಸಮ್ರೀನ್ ಮೊಹಮ್ಮದ್ ಅಬ್ಬಾಸ ಕುರ್ಡಿ ಹಾಗೂ ಅವರ 5 ವರ್ಷದ ಪುತ್ರಿ ಜುಲೇಖಾ ಪರ್ವಿನ್ ನಾಮತ್ತೆಯಾಗಿದ್ದು, ಇವರ ಪತ್ತೆಗೆ ಭಟ್ಕಳ ಗ್ರಾಮೀಣ ಪೊಲೀಸರು ಸಾರ್ವಜನಿಕರ ಸಹಕಾರ ಕೋರಿದ್ದಾರೆ.
ಫಾತಿಮಾ ಸಮ್ರೀನ್ ಅವರು ಗೋಧಿ ಮೈಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಸುಮಾರು 4.8 ಅಡಿ ಎತ್ತರವಿದ್ದಾರೆ. ಮನೆಯಿಂದ ತೆರಳುವ ಸಂದರ್ಭದಲ್ಲಿ ಚೂಡಿದಾರ ಹಾಗೂ ಕಪ್ಪು ಬಣ್ಣದ ಬುರ್ಖಾ ಧರಿಸಿದ್ದರು. ಅವರು ಉರ್ದು, ಕನ್ನಡ, ನವಾಯಿತಿ ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ.
ಜುಲೇಖಾ ಪರ್ವಿನ್ ಗೋಧಿ ಮೈಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಸುಮಾರು 2.5 ಅಡಿ ಎತ್ತರವಿದ್ದಾರೆ. ಮನೆಯಿಂದ ತೆರಳುವಾಗ ಫ್ರಾಕ್ ಮತ್ತು ಲೆಗ್ಗಿನ್ಸ್ ಧರಿಸಿದ್ದರು. ಅವರು ಉರ್ದು ಹಾಗೂ ಹಿಂದಿ ಮಾತನಾಡುತ್ತಾರೆ.
ಈ ಚಹರೆಯುಳ್ಳ ತಾಯಿ–ಮಗಳು ಸಾರ್ವಜನಿಕರಿಗೆ ಎಲ್ಲಿಯಾದರೂ ಕಂಡುಬಂದಲ್ಲಿ ತಕ್ಷಣ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ: 08385-227333, ಪಿಎಸ್‌ಐ, ಭಟ್ಕಳ ಗ್ರಾಮೀಣ ಠಾಣೆ: 9480805252 ಅಥವಾ ಕಾರವಾರ ಪೊಲೀಸ್ ಕಂಟ್ರೋಲ್ ರೂಂ: 08382-226550 / 112 / 100 ಸಂಖ್ಯೆಗೆ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.