Monday, September 7, 2026
Join WhatsApp Group
HomeLocal Newsಬಿಎಸ್‌ಎನ್‌ಎಲ್‌; ಸ್ವಾತಂತ್ರ್ಯೋತ್ಸವದೊಂದಿಗೆ 300 ರೂ ಉಳಿಸಿ!

ಬಿಎಸ್‌ಎನ್‌ಎಲ್‌; ಸ್ವಾತಂತ್ರ್ಯೋತ್ಸವದೊಂದಿಗೆ 300 ರೂ ಉಳಿಸಿ!

ಕಾರವಾರ: ಸ್ವಾತಂತ್ರ್ಯೋತ್ಸವದ ಅಂಗವಾಗಿ ಬಿಎಸ್‌ಎನ್‌ಎಲ್ ಹೊಸ ಎಫ್‌ಟಿಟಿಎಚ್ ಗ್ರಾಹಕರಿಗಾಗಿ ವಿಶೇಷ ಪ್ರಚಾರಾತ್ಮಕ ಕೊಡುಗೆಯನ್ನು ಪರಿಚಯಿಸಿದೆ. ಆ.1ರಿಂದ ಜಾರಿಗೆ ಬಂದಿರುವ ಈ ಕೊಡುಗೆ 90 ದಿನಗಳ ಅವಧಿಗೆ ಅನ್ವಯಿಸಲಿದ್ದು, ಕೇರಳವನ್ನು ಹೊರತುಪಡಿಸಿ ದೇಶದ ಎಲ್ಲ ಟೆಲಿಕಾಮ್ ಸರ್ಕಲ್‌ಗಳಲ್ಲಿ ಲಭ್ಯವಿರಲಿದೆ.

ಕರ್ನಾಟಕದ ಗ್ರಾಹಕರಿಗೆ ತಿಂಗಳಿಗೆ ₹499 ಎಫ್‌ಎಂಸಿ ಇರುವ ಫೈಬರ್ ಬೇಸಿಕ್ ಪ್ಲಾನ್ ಈ ಕೊಡುಗೆಯಡಿ ಬರಲಿದೆ. ಹೊಸ ಗ್ರಾಹಕರು ಸಂಪರ್ಕ ಪಡೆಯುವ ಕ್ಯಾಲೆಂಡರ್ ತಿಂಗಳು ಸಂಪೂರ್ಣ ಉಚಿತವಾಗಿರಲಿದೆ.

ಉಚಿತ ತಿಂಗಳ ಬಳಿಕದ ಮೊದಲ ಮೂರು ತಿಂಗಳು ಪ್ರತಿ ತಿಂಗಳು ₹100 ರಿಯಾಯಿತಿ ದೊರೆಯಲಿದ್ದು, ಈ ಅವಧಿಯಲ್ಲಿ ಪ್ಲಾನ್ ಪರಿಣಾಮಕಾರಿಯಾಗಿ ತಿಂಗಳಿಗೆ ₹399ಕ್ಕೆ ಲಭ್ಯವಾಗಲಿದೆ. ಮೂರು ರಿಯಾಯಿತಿ ತಿಂಗಳುಗಳು ಪೂರ್ಣಗೊಂಡ ಬಳಿಕ ಗ್ರಾಹಕರಿಗೆ ಎಂದಿನಂತೆ ₹499 ಮಾಸಿಕ ಪ್ಲಾನ್ ಶುಲ್ಕ ವಿಧಿಸಲಾಗುತ್ತದೆ.

ಎಲ್ಲಾ ಶುಲ್ಕಗಳು ಜಿಎಸ್‌ಟಿ ಹೊರತುಪಡಿಸಿ ಅನ್ವಯವಾಗಲಿವೆ ಎಂದು ಬಿಎಸ್‌ಎನ್‌ಎಲ್ ತಿಳಿಸಿದೆ.

ಈ ವಿಶೇಷ ಕೊಡುಗೆಯ ಲಾಭ ಪಡೆಯಲು ಹಾಗೂ ಪ್ಲಾನ್‌ಗಳ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಗ್ರಾಹಕರು ಸಮೀಪದ BSNL Customer Service Centre, ಅಧಿಕೃತ ಫ್ರಾಂಚೈಸಿ ಅಥವಾ Bharat Fiber Partnerರನ್ನು ಸಂಪರ್ಕಿಸಬಹುದಾಗಿದೆ.

ಸ್ವಾತಂತ್ರ್ಯೋತ್ಸವದ ಪ್ರಯುಕ್ತ ನೀಡಲಾಗಿರುವ ಈ ಪ್ರಚಾರಾತ್ಮಕ ಕೊಡುಗೆಯ ಸದುಪಯೋಗ ಪಡೆದುಕೊಂಡು ಹೆಚ್ಚಿನ ವೇಗದ, ವಿಶ್ವಾಸಾರ್ಹ ಹಾಗೂ ಕೈಗೆಟುಕುವ ದರದ Bharat Fiber ಸಂಪರ್ಕ ಪಡೆಯುವಂತೆ ಬಿಎಸ್‌ಎನ್‌ಎಲ್ ಕಚೇರಿಯ ಪ್ರಕಟಣೆ ತಿಳಿಸಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share