ಕಾರವಾರ: ಸ್ವಾತಂತ್ರ್ಯೋತ್ಸವದ ಅಂಗವಾಗಿ ಬಿಎಸ್ಎನ್ಎಲ್ ಹೊಸ ಎಫ್ಟಿಟಿಎಚ್ ಗ್ರಾಹಕರಿಗಾಗಿ ವಿಶೇಷ ಪ್ರಚಾರಾತ್ಮಕ ಕೊಡುಗೆಯನ್ನು ಪರಿಚಯಿಸಿದೆ. ಆ.1ರಿಂದ ಜಾರಿಗೆ ಬಂದಿರುವ ಈ ಕೊಡುಗೆ 90 ದಿನಗಳ ಅವಧಿಗೆ ಅನ್ವಯಿಸಲಿದ್ದು, ಕೇರಳವನ್ನು ಹೊರತುಪಡಿಸಿ ದೇಶದ ಎಲ್ಲ ಟೆಲಿಕಾಮ್ ಸರ್ಕಲ್ಗಳಲ್ಲಿ ಲಭ್ಯವಿರಲಿದೆ.
ಕರ್ನಾಟಕದ ಗ್ರಾಹಕರಿಗೆ ತಿಂಗಳಿಗೆ ₹499 ಎಫ್ಎಂಸಿ ಇರುವ ಫೈಬರ್ ಬೇಸಿಕ್ ಪ್ಲಾನ್ ಈ ಕೊಡುಗೆಯಡಿ ಬರಲಿದೆ. ಹೊಸ ಗ್ರಾಹಕರು ಸಂಪರ್ಕ ಪಡೆಯುವ ಕ್ಯಾಲೆಂಡರ್ ತಿಂಗಳು ಸಂಪೂರ್ಣ ಉಚಿತವಾಗಿರಲಿದೆ.
ಉಚಿತ ತಿಂಗಳ ಬಳಿಕದ ಮೊದಲ ಮೂರು ತಿಂಗಳು ಪ್ರತಿ ತಿಂಗಳು ₹100 ರಿಯಾಯಿತಿ ದೊರೆಯಲಿದ್ದು, ಈ ಅವಧಿಯಲ್ಲಿ ಪ್ಲಾನ್ ಪರಿಣಾಮಕಾರಿಯಾಗಿ ತಿಂಗಳಿಗೆ ₹399ಕ್ಕೆ ಲಭ್ಯವಾಗಲಿದೆ. ಮೂರು ರಿಯಾಯಿತಿ ತಿಂಗಳುಗಳು ಪೂರ್ಣಗೊಂಡ ಬಳಿಕ ಗ್ರಾಹಕರಿಗೆ ಎಂದಿನಂತೆ ₹499 ಮಾಸಿಕ ಪ್ಲಾನ್ ಶುಲ್ಕ ವಿಧಿಸಲಾಗುತ್ತದೆ.
ಎಲ್ಲಾ ಶುಲ್ಕಗಳು ಜಿಎಸ್ಟಿ ಹೊರತುಪಡಿಸಿ ಅನ್ವಯವಾಗಲಿವೆ ಎಂದು ಬಿಎಸ್ಎನ್ಎಲ್ ತಿಳಿಸಿದೆ.
ಈ ವಿಶೇಷ ಕೊಡುಗೆಯ ಲಾಭ ಪಡೆಯಲು ಹಾಗೂ ಪ್ಲಾನ್ಗಳ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಗ್ರಾಹಕರು ಸಮೀಪದ BSNL Customer Service Centre, ಅಧಿಕೃತ ಫ್ರಾಂಚೈಸಿ ಅಥವಾ Bharat Fiber Partnerರನ್ನು ಸಂಪರ್ಕಿಸಬಹುದಾಗಿದೆ.
ಸ್ವಾತಂತ್ರ್ಯೋತ್ಸವದ ಪ್ರಯುಕ್ತ ನೀಡಲಾಗಿರುವ ಈ ಪ್ರಚಾರಾತ್ಮಕ ಕೊಡುಗೆಯ ಸದುಪಯೋಗ ಪಡೆದುಕೊಂಡು ಹೆಚ್ಚಿನ ವೇಗದ, ವಿಶ್ವಾಸಾರ್ಹ ಹಾಗೂ ಕೈಗೆಟುಕುವ ದರದ Bharat Fiber ಸಂಪರ್ಕ ಪಡೆಯುವಂತೆ ಬಿಎಸ್ಎನ್ಎಲ್ ಕಚೇರಿಯ ಪ್ರಕಟಣೆ ತಿಳಿಸಿದೆ.