Ad
Ad
Ad
Home Crime ಮನೆಯಂಗಳದಲ್ಲಿ ಮದ್ಯ ಸೇವನೆಗೆ ಅವಕಾಶ; ಪ್ರಕರಣ ದಾಖಲು

ಮನೆಯಂಗಳದಲ್ಲಿ ಮದ್ಯ ಸೇವನೆಗೆ ಅವಕಾಶ; ಪ್ರಕರಣ ದಾಖಲು

0
7

ಕಾರವಾರ: ಮನೆಯ ಮುಂದಿನ ಅಂಗಳದಲ್ಲಿ ಸಾರ್ವಜನಿಕವಾಗಿ ಅನಧಿಕೃತವಾಗಿ ಸರಾಯಿ ಸೇವಿಸಲು ಅವಕಾಶ ಮಾಡಿಕೊಟ್ಟ ಆರೋಪದ ಮೇಲೆ ಮಹಿಳೆಯೊಬ್ಬರ ವಿರುದ್ಧ ಕಾರವಾರ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರವಾರದ ಹಬ್ಬುವಾಡ ಕೋಡಿಬಾಗ ನಿವಾಸಿ ನಿರ್ಮಲಾ ದೇವಿದಾಸ ನಾಯ್ಕ (65) ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಆ.31ರಂದು ರಾತ್ರಿ ಸುಮಾರು 7.50ರ ವೇಳೆಗೆ ನಿರ್ಮಲಾ ನಾಯ್ಕ ಹಬ್ಬುವಾಡದಲ್ಲಿರುವ ತಮ್ಮ ಮನೆಯ ಮುಂದಿನ ಅಂಗಳದಲ್ಲಿ ಸಾರ್ವಜನಿಕವಾಗಿ ಅನಧಿಕೃತವಾಗಿ ಸರಾಯಿ ಸೇವಿಸಲು ಅವಕಾಶ ಮಾಡಿಕೊಡುತ್ತಿದ್ದರು ಎಂಬ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಕುರಿತು ಕಾರವಾರ ಶಹರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಉದ್ದಪ್ಪ ಅ. ಧರೆಪ್ಪನವರ ಅವರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

error: Content is protected !!