ಕಾರವಾರ: ಶಿಕ್ಷಕರ ದಿನಾಚರಣೆಯ ಹಿನ್ನೆಲೆಯಲ್ಲಿ ನೀಡಲಾಗುವ 2026–27ನೇ ಸಾಲಿನ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಕಾರವಾರ ಶೈಕ್ಷಣಿಕ ಜಿಲ್ಲೆಯ ಐದು ತಾಲೂಕುಗಳಿಂದ ಒಟ್ಟು 15 ಶಿಕ್ಷಕರು ಆಯ್ಕೆಯಾಗಿದ್ದಾರೆ. ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗಗಳಲ್ಲಿ ತಲಾ ಐವರು ಶಿಕ್ಷಕರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲೂಕುಗಳಿಂದ ತಲಾ ಮೂವರು ಶಿಕ್ಷಕರು ಪ್ರಶಸ್ತಿಗೆ ಆಯ್ಕೆಯಾಗಿರುವುದು ವಿಶೇಷ.
ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ
- ಕಾರವಾರ: ವಿಶಾಂತ ನಾಯ್ಕ-ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಕೋಡಿಬಾಗ ನಂ.2
- ಅಂಕೋಲಾ: ರಮೇಶ ಕೇಶವ ಹೆಗಡೆ-ಸ.ಕಿ.ಪ್ರಾ.ಶಾಲೆ, ಮಳಲಗಾವ
- ಕುಮಟಾ: ಶೈಲಾ ದಿನಕರ ನಾಯ್ಕ-ಸ.ಕಿ.ಪ್ರಾ.ಶಾಲೆ, ನೆಹರು ನಗರ
- ಹೊನ್ನಾವರ: ಲಕ್ಷ್ಮಣ ಮಂಜುನಾಥ ಪಟಗಾರ-ಸ.ಹಿ.ಪ್ರಾ.ಶಾಲೆ, ಖಂಡೋಡಿ
- ಭಟ್ಕಳ: ಯಶವಂತ ಆರ್. ನಾಯ್ಕ-ಸ.ಕಿ.ಪ್ರಾ.ಶಾಲೆ, ಬಬ್ಬನಕಲ್
ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ
- ಕಾರವಾರ: ಶೋಭಾ ಆರ್. ಕಾಮತ-ಸರಕಾರಿ ಹಿರಿಯ ಪ್ರಾಥಮಿಕ ಹೆಣ್ಣುಮಕ್ಕಳ ಕನ್ನಡ ಶಾಲೆ, ಕೋಡಿಬಾಗ
- ಅಂಕೋಲಾ: ಶೋಭಾ ಸಣ್ಣಪ್ಪ ನಾಯಕ-ಸ.ಹಿ.ಪ್ರಾ.ಶಾಲೆ, ಗುಂಡಬಾಳ
- ಕುಮಟಾ: ರಾಮಚಂದ್ರ ಸುಬ್ರಾಯ ಶೆಟ್ಟಿ-ಸ.ಮಾ.ಹಿ.ಪ್ರಾ.ಶಾಲೆ, ಗುಡಿಗಾರಗಲ್ಲಿ
- ಹೊನ್ನಾವರ: ಸಾಲ್ವದೋರ್ ಮಿಂಗ್ಲಿ ಲೋಪಿಸ್-ಸ.ಹಿ.ಪ್ರಾ.ಶಾಲೆ, ಸಂಶಿ
- ಭಟ್ಕಳ: ಮಾದೇವಿ ಟಿ. ಹರಿಕಾಂತ-ಸ.ಹಿ.ಪ್ರಾ.ಶಾಲೆ, ಮಡಿಕೇರಿ
ಪ್ರೌಢಶಾಲಾ ವಿಭಾಗದಲ್ಲಿ
- ಕಾರವಾರ: ಸಂತೋಷ ಭರಮಾಣಿ ಕಾಂಬಳೆ-ಶಿವಾಜಿ ವಿದ್ಯಾಮಂದಿರ ಪ್ರೌಢಶಾಲೆ, ಅಸ್ನೋಟಿ (ಅನುದಾನಿತ)
- ಅಂಕೋಲಾ: ವಿನಾಯಕ ನಾಯಕ-ಶ್ರೀ ಕಾತ್ಯಾಯಿನಿ ಹೈಸ್ಕೂಲ್, ಅವರ್ಸಾ
- ಕುಮಟಾ: ರಾಮಕೃಷ್ಣ ಎನ್. ನಾಯಕ-ಸೆಕೆಂಡರಿ ಹೈಸ್ಕೂಲ್, ಹಿರೇಗುತ್ತಿ
- ಹೊನ್ನಾವರ: ಭಾರತಿ ಆನಂದು ಶಾನಭಾಗ-ಸರಕಾರಿ ಪ್ರೌಢಶಾಲೆ, ಚಿತ್ತಾರ
- ಭಟ್ಕಳ: ಪ್ರಕಾಶ ಮಾಧವ ಶಿರಾಲಿ-ಸರಕಾರಿ ಪ್ರೌಢಶಾಲೆ, ಬೆಳಕೆ
ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಹಾಗೂ ಸಾಧನೆಗಳನ್ನು ಪರಿಗಣಿಸಿ ಈ ಶಿಕ್ಷಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.