Friday, March 13, 2026
HomeLocal Newsಪಕ್ಷನಿಷ್ಠನಿಗೆ ಜಿಲ್ಲಾ ರೈತಮೋರ್ಚಾ ಅಧ್ಯಕ್ಷ ಸ್ಥಾನ

ಪಕ್ಷನಿಷ್ಠನಿಗೆ ಜಿಲ್ಲಾ ರೈತಮೋರ್ಚಾ ಅಧ್ಯಕ್ಷ ಸ್ಥಾನ

ಶಿರಸಿ:  ಪಕ್ಷನಿಷ್ಠೆ, ಕರ್ತವ್ಯ ಶ್ರದ್ಧೆ ಮತ್ತು ಸಂಘಟನಾ ಶಕ್ತಿ, ರೈತಪರ ಕಾಳಜಿಯನ್ನು ಗುರುತಿಸಿ, ಶಿರಸಿಯ ಅನಂತಮೂರ್ತಿ ಹೆಗಡೆ ಅವರನ್ನು ಬಿಜೆಪಿಯ ಉತ್ತರಕನ್ನಡ ಜಿಲ್ಲಾ ರೈತಮೋರ್ಚಾ ಅಧ್ಯಕ್ಷರನ್ನಾಗಿ ನೇಮಿಸಿ ಜಿಲ್ಲಾಧ್ಯಕ್ಷರಾದ  ಎನ್.ಎಸ್. ಹೆಗಡೆ ಆದೇಶ ಹೊರಡಿಸಿದ್ದು, ಇದಕ್ಕಾಗಿ ಅನಂತಮೂರ್ತಿ ಹೆಗಡೆ ಸರ್ವರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.

ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ನನ್ನನ್ನು ಸದಾ ಹುರಿದುಂಬಿಸಿ ಬೆಂಬಲಿಸುತ್ತಿರುವ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ, ಪಕ್ಷವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ, ರಾಜ್ಯ ರೈತಮೋರ್ಚಾ ಅಧ್ಯಕ್ಷರಾದ ಎ.ಎಸ್. ಪಾಟೀಲ ನಡಹಳ್ಳಿ ಹಾಗೂ ರೈತಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪಿ.ರಾಜೀವ, ಮಾಜಿ ಸಚಿವರುಗಳಾದ ಸುನೀಲ್ ಕುಮಾರ ಕಾರ್ಕಳ, ಹರತಾಳು ಹಾಲಪ್ಪ, ರಾಜ್ಯ ಉಪಾಧ್ಯಕ್ಷರಾದ ರೂಪಾಲಿ ಎಸ್ ನಾಯ್ಕ, ಕುಮಟಾ ಶಾಸಕರಾದ ದಿನಕರ ಕೆ ಶೆಟ್ಟಿ,, ಮಾಜಿ ಶಾಸಕರುಗಳಾದ ಸುನೀಲ ನಾಯ್ಕ, ಸುನೀಲ್ ಹೆಗಡೆ, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಕೆ.ಜಿ. ನಾಯ್ಕ, ಪಕ್ಷದ ಜಿಲ್ಲೆಯ ಎಲ್ಲ ಪ್ರಧಾನ ಕಾರ್ಯದರ್ಶಿಗಳು, ನಿಕಟಪೂರ್ವ ಅಧ್ಯಕ್ಷರಾದ ರಮೇಶ ನಾಯ್ಕ ಕುಪ್ಪಳ್ಳಿ, ಜಿಲ್ಲಾ ಕೋರ್ ಕಮಿಟಿ ಸದಸ್ಯರು, ಎಲ್ಲಾ ಮಂಡಳಾಧ್ಯಕ್ಷರು, ಸಮಸ್ತ ಕಾರ್ಯಕರ್ತರು,ಹಿತೈಷಿಗಳಿಗೆ ಅನಂತಮೂರ್ತಿ ಹೆಗಡೆ ಧನ್ಯವಾದ ತಿಳಿಸಿದ್ದಾರೆ.

ನಿರಂತರ ಹೋರಾಟದಿಂದ ಗುರುತಿಸಿಕೊಂಡಿದ್ದು, ಪಕ್ಷ ನೀಡಿದ ಹುದ್ದೆಗೆ ನ್ಯಾಯ ಒದಗಿಸುವುದರ ಜೊತೆಗೆ ಜಿಲ್ಲೆಯ ರೈತಪರ, ಪಕ್ಷದ ಕಾರ್ಯಕರ್ತರ ಪರ, ನೊಂದವರ ಪರ, ನ್ಯಾಯದ ಪರ ಧ್ವನಿಯಾಗಿ ಕೆಲಸ ಮಾಡುತ್ತೇನೆಂದು ಆಶ್ವಾಸನೆ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share