ಕಾರವಾರ: ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ನಡೆಯಲಿರುವ ಗಣೇಶಮೂರ್ತಿ ವಿಸರ್ಜನೆ ಮೆರವಣಿಗೆಗಳ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಜಿಲ್ಲೆಯ ಹಲವು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮದ್ಯ ಮಾರಾಟ ಹಾಗೂ ಸಾಗಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಆದೇಶ ಹೊರಡಿಸಿದ್ದಾರೆ.
ವಿಸರ್ಜನೆ ಮೆರವಣಿಗೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹಾಗೂ ಮಹಿಳೆಯರು ಭಾಗವಹಿಸುವ ಹಿನ್ನೆಲೆಯಲ್ಲಿ ಕೆಲವರು ಮದ್ಯಪಾನ ಮಾಡಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿಷೇಧ ಜಾರಿಗೊಳಿಸಲಾಗಿದೆ.
ಆದೇಶದಂತೆ ಭಟ್ಕಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೆ.16ರಂದು ಬೆಳಗ್ಗೆ 6ರಿಂದ 24 ಗಂಟೆಗಳ ಕಾಲ, ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೆ.14ರಂದು ಬೆಳಗ್ಗೆ 6ರಿಂದ 24 ಗಂಟೆಗಳ ಕಾಲ ಹಾಗೂ ಮುರುಡೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೆ.24ರಂದು ಬೆಳಗ್ಗೆ 6ರಿಂದ 24 ಗಂಟೆಗಳ ಕಾಲ ಮದ್ಯ ಮಾರಾಟ ಮತ್ತು ಸಾಗಾಟ ನಿಷೇಧಿಸಲಾಗಿದೆ.
ಮಂಕಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೆ.16ರಂದು ಬೆಳಗ್ಗೆ 6ರಿಂದ 48 ಗಂಟೆಗಳ ಕಾಲ, ಹೊನ್ನಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೆ.18ರಂದು ಬೆಳಗ್ಗೆ 6ರಿಂದ 24 ಗಂಟೆಗಳ ಕಾಲ, ಸೆ.20ರಂದು ಬೆಳಗ್ಗೆ 6ರಿಂದ 24 ಗಂಟೆಗಳ ಕಾಲ ಹಾಗೂ ಸೆ.22ರಂದು ಬೆಳಗ್ಗೆ 6ರಿಂದ 24 ಗಂಟೆಗಳ ಕಾಲ ನಿಷೇಧ ಜಾರಿಯಲ್ಲಿರಲಿದೆ.
ಕುಮಟಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೆ.18 ಹಾಗೂ ಸೆ.20ರಂದು ಬೆಳಗ್ಗೆ 6ರಿಂದ ತಲಾ 24 ಗಂಟೆಗಳ ಕಾಲ ಮತ್ತು ಗೋಕರ್ಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೆ.17ರಂದು ಬೆಳಗ್ಗೆ 6ರಿಂದ 48 ಗಂಟೆಗಳ ಕಾಲ ಮದ್ಯ ಮಾರಾಟ ಹಾಗೂ ಸಾಗಾಟಕ್ಕೆ ನಿರ್ಬಂಧವಿದೆ.
ಕಾರವಾರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೆ.18, ಸೆ.20, ಸೆ.22 ಹಾಗೂ ಸೆ.24ರಂದು ಬೆಳಗ್ಗೆ 6ರಿಂದ 24 ಗಂಟೆಗಳ ಕಾಲ, ಮಲ್ಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೆ.20 ಹಾಗೂ ಸೆ.22ರಂದು ಬೆಳಗ್ಗೆ 6ರಿಂದ 24 ಗಂಟೆಗಳ ಕಾಲ ಮದ್ಯ ನಿಷೇಧಿಸಲಾಗಿದೆ.
ಅಂಕೋಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೆ.15ರಂದು ಬೆಳಗ್ಗೆ 6ರಿಂದ 24 ಗಂಟೆಗಳ ಕಾಲ, ಸೆ.18ರಂದು ಬೆಳಗ್ಗೆ 6ರಿಂದ 24 ಗಂಟೆಗಳ ಕಾಲ, ಸೆ.20ರಂದು ಬೆಳಗ್ಗೆ 6ರಿಂದ 24 ಗಂಟೆಗಳ ಕಾಲ ಹಾಗೂ ಸೆ.22ರಂದು ಬೆಳಗ್ಗೆ 6ರಿಂದ ಸೆ.25ರ ಬೆಳಗ್ಗೆ 6ರವರೆಗೆ ಮದ್ಯ ಮಾರಾಟ ಮತ್ತು ಸಾಗಾಟ ನಿಷೇಧಿಸಲಾಗಿದೆ.
ಶಿರಸಿ ತಾಲೂಕು ವ್ಯಾಪ್ತಿಯಲ್ಲಿ ಸೆ.18ರ ಬೆಳಗ್ಗೆ 6ರಿಂದ ಸೆ.20ರ ಬೆಳಗ್ಗೆ 6ರವರೆಗೆ, ಅಲ್ಲದೆ ಸೆ.23 ಹಾಗೂ ಸೆ.25ರಂದು ಬೆಳಗ್ಗೆ 6ರಿಂದ 24 ಗಂಟೆಗಳ ಕಾಲ ನಿಷೇಧ ಜಾರಿಯಲ್ಲಿರಲಿದೆ.
ಸಿದ್ದಾಪುರ ತಾಲೂಕು ವ್ಯಾಪ್ತಿಯಲ್ಲಿ ಸೆ.18ರಂದು ಬೆಳಗ್ಗೆ 6ರಿಂದ 24 ಗಂಟೆಗಳ ಕಾಲ ಹಾಗೂ ಸೆ.20ರ ಬೆಳಗ್ಗೆ 6ರಿಂದ ಸೆ.21ರ ಬೆಳಗ್ಗೆ 6ರವರೆಗೆ ಮದ್ಯ ಮಾರಾಟ ಮತ್ತು ಸಾಗಾಟಕ್ಕೆ ನಿರ್ಬಂಧವಿದೆ.
ಮುಂಡಗೋಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೆ.18, ಸೆ.20, ಸೆ.22 ಹಾಗೂ ಸೆ.26ರಂದು ಬೆಳಗ್ಗೆ 6ರಿಂದ 24 ಗಂಟೆಗಳ ಕಾಲ ಮದ್ಯ ನಿಷೇಧಿಸಲಾಗಿದೆ.
ಯಲ್ಲಾಪುರ ಪಟ್ಟಣ, ಮಂಚಿಕೇರಿ ಹಾಗೂ ಕಿರವತ್ತಿ ವ್ಯಾಪ್ತಿಯಲ್ಲಿ ಸೆ.18, ಸೆ.20 ಹಾಗೂ ಸೆ.24ರಂದು ಬೆಳಗ್ಗೆ 6ರಿಂದ 24 ಗಂಟೆಗಳ ಕಾಲ ಮದ್ಯ ಮಾರಾಟ ಹಾಗೂ ಸಾಗಾಟ ನಿಷೇಧಿಸಲಾಗಿದೆ.
ದಾಂಡೇಲಿ ತಾಲೂಕು ವ್ಯಾಪ್ತಿಯಲ್ಲಿ ಸೆ.18, ಸೆ.20, ಸೆ.22 ಹಾಗೂ ಸೆ.25ರಂದು ಬೆಳಗ್ಗೆ 6ರಿಂದ ತಲಾ 24 ಗಂಟೆಗಳ ಕಾಲ, ಹಳಿಯಾಳ ತಾಲೂಕು ವ್ಯಾಪ್ತಿಯಲ್ಲಿ ಸೆ.18, ಸೆ.20, ಸೆ.22 ಹಾಗೂ ಸೆ.24ರಂದು ಬೆಳಗ್ಗೆ 6ರಿಂದ 24 ಗಂಟೆಗಳ ಕಾಲ ನಿಷೇಧ ಜಾರಿಯಲ್ಲಿರಲಿದೆ.
ಜೋಯಿಡಾ ತಾಲೂಕು ವ್ಯಾಪ್ತಿಯಲ್ಲಿ ಸೆ.20 ಹಾಗೂ ಸೆ.22ರಂದು ಬೆಳಗ್ಗೆ 6ರಿಂದ 24 ಗಂಟೆಗಳ ಕಾಲ ಮತ್ತು ಸೆ.24ರಂದು ಬೆಳಗ್ಗೆ 6ರಿಂದ 48 ಗಂಟೆಗಳ ಕಾಲ ಮದ್ಯ ಮಾರಾಟ ಮತ್ತು ಸಾಗಾಟ ನಿಷೇಧಿಸಲಾಗಿದೆ.
ರಾಮನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೆ.20, ಸೆ.22 ಹಾಗೂ ಸೆ.25ರಂದು ಬೆಳಗ್ಗೆ 6ರಿಂದ 24 ಗಂಟೆಗಳ ಕಾಲ ನಿಷೇಧ ಜಾರಿಯಲ್ಲಿರಲಿದೆ.
ಈ ಅವಧಿಯಲ್ಲಿ ವೈನ್ಶಾಪ್ಗಳು, ಬಾರ್ಗಳು ಸೇರಿದಂತೆ ಎಲ್ಲ ರೀತಿಯ ಮದ್ಯ ಮಾರಾಟ ಹಾಗೂ ಸಾಗಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಸಂಬಂಧಪಟ್ಟವರು ಜಿಲ್ಲಾಡಳಿತದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ.