Saturday, September 19, 2026
Join WhatsApp Group
HomeLocal Newsಮೋದಿ ಜನ್ಮದಿನ: ಗೋವರ್ಧನ ಗೋಶಾಲೆಗೆ ಗ್ರಾಸ ಸಮರ್ಪಣೆ

ಮೋದಿ ಜನ್ಮದಿನ: ಗೋವರ್ಧನ ಗೋಶಾಲೆಗೆ ಗ್ರಾಸ ಸಮರ್ಪಣೆ

ಯಲ್ಲಾಪುರ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಯಲ್ಲಾಪುರದ ಬಿಜೆಪಿ ಕಾರ್ಯಕರ್ತರು ಕರಡೊಳ್ಳಿಯ ಗೋವರ್ಧನ ಶಾಲೆಗೆ ಭೇಟಿ ನೀಡಿ, ಒಂದು ದಿನಕ್ಕೆ ಅಗತ್ಯವಾಗುವ ಮೇವನ್ನು ಮೋದಿ ಅವರ ಹೆಸರಿನಲ್ಲಿ ಸಮರ್ಪಿಸಿದರು.

ಮೋದಿ ಅವರ ಜನ್ಮದಿನವನ್ನು ಕೇವಲ ಶುಭಾಶಯಗಳಿಗೆ ಸೀಮಿತಗೊಳಿಸದೆ, ಗೋವರ್ಧನ ಶಾಲೆಯಲ್ಲಿರುವ ಗೋವುಗಳ ಒಂದು ದಿನದ ಆಹಾರದ ಹೊಣೆ ಹೊತ್ತುಕೊಳ್ಳುವ ಮೂಲಕ ಆಚರಿಸಿರುವುದು ಕಾರ್ಯಕ್ರಮದ ವಿಶೇಷವಾಗಿತ್ತು. ಪಕ್ಷದ ಕಾರ್ಯಕರ್ತರು ಶಾಲೆಗೆ ಭೇಟಿ ನೀಡಿ ಮೇವನ್ನು ಸಮರ್ಪಿಸಿದ್ದು, ಜನ್ಮದಿನದ ಆಚರಣೆಯನ್ನು ಸೇವಾ ಕಾರ್ಯದೊಂದಿಗೆ ಜೋಡಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ್ ಹೆಗಡೆ, ಉಪಾಧ್ಯಕ್ಷ ನಾಗರಾಜ ಕವಡಿಕೆರೆ, ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ಜಿಲ್ಲಾ ಉಪಾಧ್ಯಕ್ಷ ಅಶೋಕ ಛಲವಾದಿ, ಪಕ್ಷದ ಪದಾಧಿಕಾರಿಗಳಾದ ಉಮೇಶ್ ಭಾಗವತ, ರಾಘವೇಂದ್ರ ಭಟ್ಟ ಸೇರಿದಂತೆ ಬಾಲಕೃಷ್ಣ ನಾಯಕ, ಗಣೇಶ ಪಾಟಣಕರ, ರವಿ ಕೈಟ್ಕರ್, ಸುಬ್ಬಣ್ಣ ಬೋಳ್ಮನೆ, ರಾಮಚಂದ್ರ ಚಿಕ್ಯಾನಮನೆ, ಸೋಮೇಶ್ವರ ನಾಯ್ಕ, ಭಾಸ್ಕರ ಸಿದ್ದಿ, ರಘುಪತಿ ಹೆಗಡೆ, ಮಹೇಶ ದೇಸಾಯಿ, ಚಂದು ಮಡಾಕರ್, ವಿಠ್ಠು ಶೆಲ್ಕೆ ಹಾಗೂ ಪ್ರಕಾಶ ಶಹಾಪುರ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad

Most Popular

error: Content is protected !!
Share