ಯಲ್ಲಾಪುರ: ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಸ್ಕೂಟರ್ ಚಾಲನೆ ಮಾಡಿ ಎದುರಿನಿಂದ ಬರುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಯಲ್ಲಾಪುರದಲ್ಲಿ ನಡೆದಿದೆ.
ದೂರಿನ ಪ್ರಕಾರ, ಉದ್ಯಮನಗರ ನಿವಾಸಿ ಜನಾರ್ಧನ ಲಕ್ಷ್ಮಣ ವಾಗಮೊರೆ ಅವರ ಪುತ್ರ ಮೋಟಾರ್ ಸೈಕಲ್ (ಕೆಎ-31/ಇಜಿ-9723)ನಲ್ಲಿ ಯಲ್ಲಾಪುರದಿಂದ ಉದ್ಯಮನಗರದ ಕಡೆಗೆ ತೆರಳುತ್ತಿದ್ದರು. ಈ ವೇಳೆ ಅಂಕೋಲಾ ಕಡೆಯಿಂದ ಯಲ್ಲಾಪುರದತ್ತ ಬರುತ್ತಿದ್ದ ಸ್ಕೂಟರ್ (ಕೆಎ-31/ಎಕ್ಸ್-9177) ಅನ್ನು ಚಾಲನೆ ಮಾಡುತ್ತಿದ್ದ ಯಲ್ಲಾಪುರ ಕೆ.ಬಿ. ರಸ್ತೆಯ ನಿವಾಸಿ ಸಚಿನ್ ನಾರಾಯಣ ಶಾನಭಾಗ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಚಾಲನೆ ಮಾಡಿಕೊಂಡು ಬಂದು ಬೈಕ್ಗೆ ಮುಂಭಾಗದಿಂದ ಡಿಕ್ಕಿ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ಅಪಘಾತದಲ್ಲಿ ಬೈಕ್ ಸವಾರನ ಎಡ ಕಣ್ಣಿನ ಕೆಳಭಾಗದ ಮೂಳೆ ಮುರಿತಗೊಂಡು ಗಂಭೀರ ಸ್ವರೂಪದ ಗಾಯವಾಗಿದೆ. ಬೈಕ್ಗೂ ಹಾನಿಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಜನಾರ್ಧನ ಲಕ್ಷ್ಮಣ ವಾಗಮೊರೆ ನೀಡಿದ ದೂರಿನ ಮೇರೆಗೆ ಸ್ಕೂಟರ್ ಚಾಲಕ ಸಚಿನ್ ನಾರಾಯಣ ಶಾನಭಾಗ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.


