Friday, October 23, 2026
HomeCrimeಶಿರಸಿ | ರಸ್ತೆಯಲ್ಲಿ ಮಹಿಳೆಯ ಚಿನ್ನದ ಸರ ಕಿತ್ತು ಪರಾರಿ

ಶಿರಸಿ | ರಸ್ತೆಯಲ್ಲಿ ಮಹಿಳೆಯ ಚಿನ್ನದ ಸರ ಕಿತ್ತು ಪರಾರಿ

ಶಿರಸಿ: ನಗರದಲ್ಲಿ ಒಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದ ತಾರಾಮತಿ ಈಶ್ವರ ನಾಯಕ ಎಂಬುವರ ಕೊರಳಲ್ಲಿದ್ದ ಚಿನ್ನದ ಹವಳದ ಸರವನ್ನು ಇಬ್ಬರು ಅಪರಿಚಿತರು ಬೈಕ್‌ನಲ್ಲಿ ಬಂದು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಅ. 8ರಂದು ಬೆಳಗ್ಗೆ ನಡೆದಿದೆ.

ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯ ದುಂಡಶಿ ನಗರ ರಸ್ತೆಯ ಮುಸ್ಲಿಂ ಗಲ್ಲಿ ಸಮೀಪ ಬೆಳಗ್ಗೆ ಸುಮಾರು 8.20ರ ವೇಳೆಗೆ ಘಟನೆ ನಡೆದಿದೆ. ಶಿರಗುಂಜಿ ಮೂಲದ, ಸದ್ಯ ಶಿರಸಿಯ ಉಂಚಳ್ಳಿಯಲ್ಲಿ ವಾಸವಿರುವ ತಾರಾಮತಿ ಈಶ್ವರ ನಾಯಕ(66) ಒಬ್ಬರೇ ನಡೆದುಕೊಂಡು ಹೋಗುತ್ತಿದ್ದ ವೇಳೆ ಕಪ್ಪು ಬಣ್ಣದ ಮೋಟಾರ್ ಸೈಕಲ್‌ನಲ್ಲಿ ಬಂದ ಇಬ್ಬರು ಅಪರಿಚಿತರ ಪೈಕಿ ಒಬ್ಬ ಅವರ ಕೊರಳಲ್ಲಿದ್ದ ಬಂಗಾರದ ಹವಳದ ಸರಕ್ಕೆ ಕೈ ಹಾಕಿ ಎಳೆದಿದ್ದಾನೆ.

ಸರ ಕಿತ್ತುಕೊಂಡ ಪರಿಣಾಮ ಅದರ ಒಂದು ತುಂಡನ್ನು ಆರೋಪಿಗಳು ಸುಲಿಗೆ ಮಾಡಿಕೊಂಡು, ಇಬ್ಬರೂ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕಿತ್ತುಕೊಂಡು ಹೋದ ಸರದ ತುಂಡು ಸುಮಾರು 2.5 ಗ್ರಾಂ ತೂಕ ಹೊಂದಿದ್ದು, ಅಂದಾಜು ರೂ.35,000 ಮೌಲ್ಯದ್ದಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಘಟನೆ ಸಂಬಂಧ ತಾರಾಮತಿ ಅವರು ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಗೆ ಹಾಜರಾಗಿ ಗಣಕೀಕೃತ ದೂರು ನೀಡಿದ್ದು, ಇಬ್ಬರು ಆರೋಪಿಗಳನ್ನು ಮತ್ತೆ ನೋಡಿದರೆ ಗುರುತಿಸುವುದಾಗಿ ದೂರುದಾರರು ಪೊಲೀಸರಿಗೆ ತಿಳಿಸಿದ್ದಾರೆ.

ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಿದ್ದು, ಕಪ್ಪು ಬಣ್ಣದ ಮೋಟಾರ್ ಸೈಕಲ್‌ನಲ್ಲಿ ಬಂದಿದ್ದ ಇಬ್ಬರು ಅಪರಿಚಿತರ ಪತ್ತೆಗೆ ಬಲೆ ಬೀಸಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share