ಹೊನ್ನಾವರ: ತಾಲೂಕಿನ ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆಳಗಿನೂರು ನಾಜಗಾರದ ಸಣ್ಣಿ ದಿನಕರ ಗೌಡ ಅವರ ತೋಟದ ಬಾವಿಗೆ ಅಳವಡಿಸಿ ಶೆಡ್ನಲ್ಲಿಟ್ಟಿದ್ದ 10 ಸಾವಿರ ರೂ. ಮೌಲ್ಯದ ಪಂಪ್ಸೆಟ್ ಕಳವಾಗಿರುವ ಬಗ್ಗೆ ದೂರು ದಾಖಲಾಗಿದೆ.
ಕೆಳಗಿನೂರು ನಾಜಗಾರದ ಸಣ್ಣಿ ದಿನಕರ ಗೌಡ ಅವರು ನೀಡಿದ ದೂರಿನ ಪ್ರಕಾರ, ಅ. 5ರ ಬೆಳಿಗ್ಗೆ 7 ಗಂಟೆಯಿಂದ ಅ. 6ರ ಬೆಳಿಗ್ಗೆ 7 ಗಂಟೆಯ ನಡುವಿನ ಅವಧಿಯಲ್ಲಿ ಅವರ ಅಡಿಕೆ ಮತ್ತು ತೆಂಗಿನ ಮರಗಳಿರುವ ತೋಟದ ಶೆಡ್ನಲ್ಲಿದ್ದ 1 ಎಚ್ಪಿ ಪಂಪ್ಸೆಟ್ ಅನ್ನು ಯಾರೋ ಕಳ್ಳರು ಕಳವು ಮಾಡಿದ್ದಾರೆ.
ಕಳವಾದ ಪಂಪ್ಸೆಟ್ ಈವರೆಗೂ ಪತ್ತೆಯಾಗದ ಹಿನ್ನೆಲೆಯಲ್ಲಿ ಅದನ್ನು ಹುಡುಕಿಕೊಡುವಂತೆ ಅವರು ಪೊಲೀಸರಿಗೆ ಲಿಖಿತ ದೂರು ನೀಡಿದ್ದಾರೆ.
ಈ ಸಂಬಂಧ ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.


