Thursday, October 22, 2026
HomeCrimeಹೊನ್ನಾವರ | ತೋಟದ ಶೆಡ್‌ನಲ್ಲಿದ್ದ ಪಂಪ್‌ಸೆಟ್ ಕಳವು

ಹೊನ್ನಾವರ | ತೋಟದ ಶೆಡ್‌ನಲ್ಲಿದ್ದ ಪಂಪ್‌ಸೆಟ್ ಕಳವು

ಹೊನ್ನಾವರ: ತಾಲೂಕಿನ ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆಳಗಿನೂರು ನಾಜಗಾರದ ಸಣ್ಣಿ ದಿನಕರ ಗೌಡ ಅವರ ತೋಟದ ಬಾವಿಗೆ ಅಳವಡಿಸಿ ಶೆಡ್‌ನಲ್ಲಿಟ್ಟಿದ್ದ 10 ಸಾವಿರ ರೂ. ಮೌಲ್ಯದ ಪಂಪ್‌ಸೆಟ್ ಕಳವಾಗಿರುವ ಬಗ್ಗೆ ದೂರು ದಾಖಲಾಗಿದೆ.

ಕೆಳಗಿನೂರು ನಾಜಗಾರದ ಸಣ್ಣಿ ದಿನಕರ ಗೌಡ ಅವರು ನೀಡಿದ ದೂರಿನ ಪ್ರಕಾರ, ಅ. 5ರ ಬೆಳಿಗ್ಗೆ 7 ಗಂಟೆಯಿಂದ ಅ. 6ರ ಬೆಳಿಗ್ಗೆ 7 ಗಂಟೆಯ ನಡುವಿನ ಅವಧಿಯಲ್ಲಿ ಅವರ ಅಡಿಕೆ ಮತ್ತು ತೆಂಗಿನ ಮರಗಳಿರುವ ತೋಟದ ಶೆಡ್‌ನಲ್ಲಿದ್ದ 1 ಎಚ್‌ಪಿ ಪಂಪ್‌ಸೆಟ್‌ ಅನ್ನು ಯಾರೋ ಕಳ್ಳರು ಕಳವು ಮಾಡಿದ್ದಾರೆ.

ಕಳವಾದ ಪಂಪ್‌ಸೆಟ್‌ ಈವರೆಗೂ ಪತ್ತೆಯಾಗದ ಹಿನ್ನೆಲೆಯಲ್ಲಿ ಅದನ್ನು ಹುಡುಕಿಕೊಡುವಂತೆ ಅವರು ಪೊಲೀಸರಿಗೆ ಲಿಖಿತ ದೂರು ನೀಡಿದ್ದಾರೆ.

ಈ ಸಂಬಂಧ ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share