Friday, October 23, 2026
HomeCrimeಯಲ್ಲಾಪುರ | ನೀರಿನ ವಿಚಾರಕ್ಕೆ ಕತ್ತಿ ಝಳಪಿಸಿ ಕೊಲೆ ಬೆದರಿಕೆ!

ಯಲ್ಲಾಪುರ | ನೀರಿನ ವಿಚಾರಕ್ಕೆ ಕತ್ತಿ ಝಳಪಿಸಿ ಕೊಲೆ ಬೆದರಿಕೆ!

ಯಲ್ಲಾಪುರ: ಜಮೀನಿಗೆ ಬೋರ್‌ವೆಲ್‌ನಿಂದ ನೀರು ಹಾಯಿಸುವ ವಿಚಾರವಾಗಿ ಉಂಟಾದ ತಕರಾರು ತಾರಕಕ್ಕೇರಿ ಜೂಜಿನಬೈಲ ಗ್ರಾಮದ ಗುರುಪ್ರಸಾದ ಮರಾಠಿ ಎಂಬುವರ ಮೇಲೆ ಅವರ ಸಂಬಂಧಿಕ ನಾಗೇಶ ಮರಾಠಿ ಕತ್ತಿಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂಜಿನಬೈಲ ಗ್ರಾಮದ ಗುರುಪ್ರಸಾದ ಮರಾಠಿ (29) ಹಲ್ಲೆಗೊಳಗಾದವರು. ಇವರ ಸಂಬಂಧಿಕ ನಾಗೇಶ ಮರಾಠಿ ಹಲ್ಲೆ ನಡೆಸಿದ ಆರೋಪಿ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಆರೋಪಿಗೆ ಸೇರಿದ ಜಾಗದಲ್ಲಿರುವ ಬೋರ್‌ವೆಲ್‌ನಿಂದ ಗುರುಪ್ರಸಾದ ಅವರು ಹಿಂದಿನಿಂದಲೂ ತಮ್ಮ ಜಮೀನಿಗೆ ನೀರು ಹರಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ. ಕಳೆದ ಎರಡು ವರ್ಷಗಳಿಂದ ನೀರು ಬಳಸುವ ವಿಚಾರವಾಗಿ ನಾಗೇಶ ಮರಾಠಿ ತಕರಾರು ಮಾಡುತ್ತಿದ್ದ ಎನ್ನಲಾಗಿದೆ.

ಅ. 17ರಂದು ಮಧ್ಯಾಹ್ನ 12.15ರ ಸುಮಾರಿಗೆ ಗುರುಪ್ರಸಾದ ಮರಾಠಿ ತಮ್ಮ ತಂದೆ ಕೃಷ್ಣ ಮರಾಠಿ ಜೊತೆ ಮೋಟಾರ್ ಸೈಕಲ್‌ನಲ್ಲಿ ಯಲ್ಲಾಪುರದಿಂದ ಜೂಜಿನಬೈಲ್‌ಗೆ ತೆರಳುತ್ತಿದ್ದಾಗ, ನಾಗೇಶ ಮರಾಠಿ ಎದುರಾಗಿದ್ದಾನೆ.

ಈ ವೇಳೆ ನೀರು ಹರಿಸಿಕೊಳ್ಳುವ ವಿಚಾರವಾಗಿ ಅವಾಚ್ಯವಾಗಿ ನಿಂದಿಸಿದ್ದಾನೆ ಎನ್ನಲಾಗಿದೆ. ಇದನ್ನು ಪ್ರಶ್ನಿಸಿದಾಗ ಕೈಯಲ್ಲಿದ್ದ ಕತ್ತಿಯಿಂದ ಹಲ್ಲೆ ನಡೆಸಲು ಯತ್ನಿಸಿದ್ದು, ತಪ್ಪಿಸಿಕೊಳ್ಳುವ ಸಂದರ್ಭದಲ್ಲಿ ಕತ್ತಿ ಗುರುಪ್ರಸಾದ ಅವರ ಕಿವಿ ಮತ್ತು ಹಣೆಗೆ ತಾಗಿ ಗಾಯಗಳಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದಲ್ಲದೆ, ಮುಂದೊಂದು ದಿನ ಕೊಂದು ಹಾಕುವುದಾಗಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share