Ad
Ad
Home Local News ಆದಿವಾಸಿ ಸಮ್ಮೇಳನದಲ್ಲಿ ಸಿದ್ದಿ ಸಮುದಾಯದ ಹಿರಿಯರ ಕಡೆಗಣನೆ: ಸುರೇಶ ಸಿದ್ದಿ ಅಸಮಾಧಾನ

ಆದಿವಾಸಿ ಸಮ್ಮೇಳನದಲ್ಲಿ ಸಿದ್ದಿ ಸಮುದಾಯದ ಹಿರಿಯರ ಕಡೆಗಣನೆ: ಸುರೇಶ ಸಿದ್ದಿ ಅಸಮಾಧಾನ

0
3

ಯಲ್ಲಾಪುರ: ಆದಿವಾಸಿಗಳ ಕರ್ನಾಟಕ ರಾಜ್ಯ ಸಮ್ಮೇಳನದಲ್ಲಿ ಸಿದ್ದಿ ಸಮುದಾಯದ ಹಿರಿಯರು, ಮುಖಂಡರು ಹಾಗೂ ಸಂಘ-ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ಸಮುದಾಯಕ್ಕೆ ಮಾಡಿದ ಅವಮಾನ ಎಂದು ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ನಾಮನಿರ್ದೇಶಿತ ಸದಸ್ಯ ಸುರೇಶ ಕೃಷ್ಣ ಸಿದ್ದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಮುದಾಯದ ಹಿರಿಯರು ಹಾಗೂ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಶಾಂತರಾಮ್ ಸಿದ್ದಿ ಅವರನ್ನು ಕಡೆಗಣಿಸಿರುವುದು ಸಿದ್ದಿ ಸಮುದಾಯಕ್ಕೆ ಮಾಡಿದ ಅಪಮಾನವಾಗಿದೆ. 

ಪಟ್ಟಣದ ಕಾರ್ಮಿಕ ಭವನದಲ್ಲಿ ಅಕ್ಟೋಬರ್ 25, 26ರಂದು ಆಯೋಜಿಸಲು ಉದ್ದೇಶಿಸಿರುವ ರಾಜ್ಯಮಟ್ಟದ ಸಮ್ಮೇಳನವು ಆದಿವಾಸಿಗಳ ಹೆಸರಿನಲ್ಲಿ ನಡೆಯುತ್ತಿದ್ದರೂ, ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಆದಿವಾಸಿ ಬುಡಕಟ್ಟು ಸಮುದಾಯಗಳಲ್ಲಿ ಒಂದಾದ ಸಿದ್ದಿ ಸಮುದಾಯದ ಹಿರಿಯರು ಹಾಗೂ ಮುಖಂಡರಿಗೆ ಆಹ್ವಾನ ನೀಡದೆ ಕಾರ್ಯಕ್ರಮ ಆಯೋಜಿಸುತ್ತಿರುವುದು ಖಂಡನೀಯ.

ವಿಶಿಷ್ಟ ಹಿನ್ನೆಲೆ ಹೊಂದಿರುವ ವನವಾಸಿ ಸಿದ್ದಿ ಸಮುದಾಯದಲ್ಲಿ ಅನೇಕ ಹಿರಿಯರಿದ್ದಾರೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸಮ್ಮೇಳನ ನಡೆಸಲು ಮುಂದಾಗಿರುವುದು ಸರಿಯಲ್ಲ. 

ಸಮ್ಮೇಳನಕ್ಕೆ ಸಮುದಾಯದ ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ ಆಹ್ವಾನ ನೀಡಿರುವುದು ಆಕ್ಷೇಪಾರ್ಹ. ಯಾರನ್ನು ಮೆಚ್ಚಿಸಲು ಈ  ಕಾರ್ಯಕ್ರಮ ನಡೆಯುತ್ತಿದೆ ಎಂದು ಆಯೋಜಕರೇ ಸ್ಪಷ್ಟಪಡಿಸಲಿ ಎಂದು ಸುರೇಶ ಸಿದ್ದಿ ಹೇಳಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

error: Content is protected !!