Ad
Ad
Home Local News ಯಲ್ಲಾಪುರ | ಗುತ್ತಿಗೆದಾರನ ನಿರ್ಲಕ್ಷ್ಯ; ಎಚ್‌ಟಿ ಲೈನ್‌ ಶಾಕ್‌ಗೆ ಕಾರ್ಮಿಕ ಬಲಿ

ಯಲ್ಲಾಪುರ | ಗುತ್ತಿಗೆದಾರನ ನಿರ್ಲಕ್ಷ್ಯ; ಎಚ್‌ಟಿ ಲೈನ್‌ ಶಾಕ್‌ಗೆ ಕಾರ್ಮಿಕ ಬಲಿ

0
3

ಯಲ್ಲಾಪುರ: ಹೈಟೆನ್ಷನ್‌ ವಿದ್ಯುತ್‌ ಮಾರ್ಗದ ಕೆಳಗೆ ಬೆಳೆದಿದ್ದ ಗಿಡಮರಗಳನ್ನು ಕಡಿಯುವ ಕೆಲಸದಲ್ಲಿ ತೊಡಗಿದ್ದ ಕಾರ್ಮಿಕನೊಬ್ಬ ವಿದ್ಯುತ್‌ ಶಾಕ್‌ ತಗುಲಿ ಮೃತಪಟ್ಟ ಘಟನೆ ತಾಲೂಕಿನ ಕಣ್ಣಿಗೇರಿ ಗ್ರಾಮದ ತಿಮ್ಮಾಪುರದಲ್ಲಿ ನಡೆದಿದೆ.

ಕಾರ್ಮಿಕನ ಸಾವಿಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಗುತ್ತಿಗೆದಾರ, ಮೇಲ್ವಿಚಾರಕ ಹಾಗೂ ಮ್ಯಾನೇಜರ್‌ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಯಲ್ಲಾಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಮೃತರನ್ನು ಧಾರವಾಡ ಜಿಲ್ಲೆಯ ಕಲಘಟಗಿಯ ರತ್ನಪ್ಪ ಲಮಾಣಿ (36) ಎಂದು ಗುರುತಿಸಲಾಗಿದ್ದು, ಅಕ್ಟೋಬರ್‌ 24ರಂದು ಮಧ್ಯಾಹ್ನ 12.30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ನಾಜಗೇರಿ–ಕೊಡಸೆ ಹೈಪವರ್‌ ವಿದ್ಯುತ್‌ ಮಾರ್ಗದ ಕೆಳಗೆ ಬೆಳೆದಿದ್ದ ಗಿಡಮರಗಳ ಟೊಂಗೆಗಳನ್ನು ಕಡಿಯುವ ಕೆಲಸಕ್ಕೆ ರತ್ನಪ್ಪ ಸೇರಿದಂತೆ 12 ಕಾರ್ಮಿಕರನ್ನು ಕರೆದುಕೊಂಡು ಬರಲಾಗಿತ್ತು. ಈ ವೇಳೆ ವಿದ್ಯುತ್‌ ಮಾರ್ಗದ ಕೆಳಗೆ ಕೆಲಸ ಮಾಡುತ್ತಿದ್ದ ರತ್ನಪ್ಪನ ಕೈಯಲ್ಲಿದ್ದ ಬಿದಿರಿಗೆ ಹೈಟೆನ್ಷನ್‌ ವಿದ್ಯುತ್‌ ತಂತಿ ತಗುಲಿ, ಬಿದಿರಿನ ಮೂಲಕ ವಿದ್ಯುತ್‌ ಪ್ರವಹಿಸಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಕಾರ್ಮಿಕರು ಕೆಲಸ ಮಾಡುವಾಗ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಲಾಗಿದೆ. ಗುತ್ತಿಗೆದಾರ ಅಚ್ಯುತನ್ ಶ್ರೀನಿವಾಸ (53), ‌ಧಾರವಾಡದವರಾದ ಪವರ್‌ ಗ್ರಿಡ್‌ನ ಮೇಲ್ವಿಚಾರಕ ಹಾಗೂ ಮ್ಯಾನೇಜರ್‌ ಅವರ ನಿರ್ಲಕ್ಷ್ಯವೇ ಪತಿಯ ಸಾವಿಗೆ ಕಾರಣ ಎಂದು ಮೃತರ ಪತ್ನಿ ಗಿರಿಜಾ ರತ್ನಪ್ಪ ಲಮಾಣಿ ದೂರಿನಲ್ಲಿ ಆರೋಪಿಸಿದ್ದಾರೆ.

ಈ ಕುರಿತು ಯಲ್ಲಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಮನೆಯಲ್ಲೇ ಕುಳಿತು ಸಾವಿರಾರು ರೂಪಾಯಿ ಸಂಪಾದಿಸಬೇಕಾ?!; ಹೀಗಂತೂ ಮಾಡಬೇಡಿ!
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

error: Content is protected !!