Friday, July 24, 2026
Join WhatsApp Group
HomeLocal Newsಕುಗ್ರಾಮದ ದಶಕದ ದಾಹ ನೀಗಿದ ಬಾಲಕೃಷ್ಣ ನಾಯಕ್

ಕುಗ್ರಾಮದ ದಶಕದ ದಾಹ ನೀಗಿದ ಬಾಲಕೃಷ್ಣ ನಾಯಕ್

ಯಲ್ಲಾಪುರ: ತಾಲ್ಲೂಕಿನ ಕಿರವತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಚನಳ್ಳಿ ವಾರ್ಡ್‌ನ ಸಣ್ಣ ಪಾನಿಗುಂಡಿ ಗ್ರಾಮದಲ್ಲಿ ಕಳೆದ 70 ವರ್ಷಗಳಿಂದ ಮುಂದುವರಿದ ಕುಡಿಯುವ ನೀರಿನ ಸಂಕಷ್ಟಕ್ಕೆ ಕೊನೆಗೂ ತೆರೆ ಬಿದ್ದಿದ್ದು, ಈ ಬದಲಾವಣೆಗೆ ಕಾರಣರಾದವರು ಯುವ ಮುಖಂಡ, ಉದ್ಯಮಿ Balakrishna Nayak.

ತಮ್ಮ ಮಗನ ಹುಟ್ಟುಹಬ್ಬವನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೇ, ಗ್ರಾಮಸ್ಥರ ಹಿತದೃಷ್ಟಿಯಿಂದ ಬೋರ್‌ವೆಲ್ ಕೊರೆಸುವ ಮೂಲಕ ಅವರು ಅರ್ಥಪೂರ್ಣ ಸೇವೆ ಸಲ್ಲಿಸಿದ್ದಾರೆ.

ದಶಕಗಳ ಕಾಲ ಹನಿ ನೀರಿಗಾಗಿ ಪರದಾಡುತ್ತಿದ್ದ ಗ್ರಾಮಸ್ಥರಿಗೆ ಶಾಶ್ವತ ಪರಿಹಾರ ಒದಗಿಸಿದ ಇವರ ಕಾರ್ಯಕ್ಕೆ ಇಡೀ ಗ್ರಾಮವೇ ಕೃತಜ್ಞತೆಯ ಮಳೆ ಸುರಿಸಿದೆ. ಇಂದಿನ ಕಾಲದಲ್ಲಿ ವೈಯಕ್ತಿಕ ಸಂಭ್ರಮಗಳಿಗೆ ಹೆಚ್ಚಿನ ಮಹತ್ವ ನೀಡುವ ಸಂದರ್ಭದಲ್ಲೇ “ಸೇವೆಯೇ ಪರಮ ಧರ್ಮ” ಎಂಬುದಕ್ಕೆ ಜೀವಂತ ಉದಾಹರಣೆಯಾಗಿರುವ ಬಾಲಕೃಷ್ಣ ನಾಯಕ್ ಅವರ ಈ ಕಾರ್ಯ ಎಲ್ಲೆಡೆ ಶ್ಲಾಘನೆಗೆ ಪಾತ್ರವಾಗಿದೆ.

ಅಧಿಕಾರ ಇರಲಿ ಅಥವಾ ಇಲ್ಲದಿರಲಿ, ಸಮಾಜದ ಕಷ್ಟಕ್ಕೆ ಸ್ಪಂದಿಸುವ ಮನಸ್ಸಿದ್ದರೆ ದೊಡ್ಡ ಬದಲಾವಣೆ ಸಾಧ್ಯ ಎಂಬುದನ್ನು ಈ ಘಟನೆ ಸಾಬೀತುಪಡಿಸಿದೆ.

ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಧನಗರ್ ಸಮಾಜದ ಯುವ ಮುಖಂಡರಾದ ವಿಟ್ಟು ಡೊಂಡು ಪಟಕಾರೆ, ಸುರೇಶ್ ಮಿರಾಶಿ, ಅರ್ಜುನ್ ಬೆಂಗೇರಿ, ಸಿದ್ದಪ್ಪ ಹುಡಿದ, ಗಂಗಾರಾಮ್ ಮೀಸಳ, ಡೊಂಡು ಮಿಸಳ, ಬಾಗು ಕೊಕ್ಕರೆ, ಜಾನು ಕೊಕ್ರೆ, ತುಕಾರಾಮ್ ಮಿಸಳ, ನಾಗು ಲಾಂಬೋರ್, ಸೀತಾರಾಮ್ ಸುಜೇಕರ್, ಜೀವ ಕೈಟ್ಕರ್, ಭೀಮ್ಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share