Saturday, May 30, 2026
HomeNationalಜನಿವಾರ ಧರಿಸಿ ಬ್ರಾಹ್ಮಣ್ಯ ಸ್ವೀಕಾರ ಮಾಡಿದ  10 ಸಾವಿರ ದಲಿತರು!

ಜನಿವಾರ ಧರಿಸಿ ಬ್ರಾಹ್ಮಣ್ಯ ಸ್ವೀಕಾರ ಮಾಡಿದ  10 ಸಾವಿರ ದಲಿತರು!

ಉತ್ತರ ಪ್ರದೇಶದ Meerut ನಲ್ಲಿ ಸುಮಾರು 10 ಸಾವಿರದಷ್ಟು ದಲಿತರು ಜನಿವಾರ ಧರಿಸುವ ಮೂಲಕ ಬ್ರಾಹ್ಮಣ್ಯವನ್ನು ಸ್ವೀಕರಿಸಿರುವ ಘಟನೆ ಗಮನ ಸೆಳೆಯುತ್ತಿದೆ.

ಸಾಮಾಜಿಕ ತಾರತಮ್ಯ ಮತ್ತು ವಿಭಜಕ ರಾಜಕೀಯದ ವಿರುದ್ಧವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಭಾಗವಹಿಸಿದವರು ತಿಳಿಸಿದ್ದಾರೆ.ಜನಿವಾರವು ವೇದಗಳು, ತ್ರಿಗುಣಗಳು ಹಾಗೂ ತ್ರಿಮೂರ್ತಿಗಳನ್ನು ಪ್ರತಿನಿಧಿಸುವ ಸಂಕೇತವಾಗಿದ್ದು, ಸಂಪ್ರದಾಯಬದ್ಧವಾಗಿ ಧರಿಸಿದರೆ ಬ್ರಾಹ್ಮಣ್ಯವನ್ನು ಸ್ವೀಕರಿಸಿದಂತಾಗುತ್ತದೆ ಎಂಬ ನಂಬಿಕೆ ಇದೆ.

ಈ ಹಿನ್ನೆಲೆ ವಿಶೇಷ ವಿಧಿ-ವಿಧಾನಗಳ ಮೂಲಕ ಸಾವಿರಾರು ಮಂದಿ ಈ ಆಚರಣೆಯಲ್ಲಿ ಭಾಗವಹಿಸಿ, ಬ್ರಾಹ್ಮಣ ಸಮುದಾಯಕ್ಕೆ ಸೇರ್ಪಡೆಯಾಗಿರುವುದಾಗಿ ಹೇಳಲಾಗಿದೆ.ಈ ನಿರ್ಧಾರದ ಬಗ್ಗೆ ಮಾತನಾಡಿದ ಕೆಲವರು, “ಬ್ರಾಹ್ಮಣ ಸಮುದಾಯದ ಆಚಾರ-ವಿಚಾರಗಳು ಹಾಗೂ ಸಂಪ್ರದಾಯಗಳು ನಮಗೆ ಆಕರ್ಷಕವಾಗಿವೆ. ಅದರಿಂದಲೇ ಈ ಹೆಜ್ಜೆ ಇಟ್ಟಿದ್ದೇವೆ” ಎಂದು ತಿಳಿಸಿದ್ದಾರೆ.

ಮತ್ತಷ್ಟು ಮಂದಿ, “ಸಮಾಜದಲ್ಲಿ ಇರುವ ಭೇದಭಾವದಿಂದ ಬೇಸತ್ತು, ಎಲ್ಲರೂ ಸಮಾನರು ಎಂಬ ಸಂದೇಶ ನೀಡಲು ಈ ಕ್ರಮ ಕೈಗೊಂಡಿದ್ದೇವೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಇನ್ನೂ ಕೆಲವರು, “ನಾವು ಜಾತಿ-ಭೇದ ಮರೆತು ಒಗ್ಗಟ್ಟಾಗಿ ಇರಲು ಪ್ರಯತ್ನಿಸಿದರೂ, ಕೆಲವರು ನಮ್ಮ ನಡುವೆ ಭೇದವನ್ನು ಸೃಷ್ಟಿಸುತ್ತಾರೆ. ರಾಜಕೀಯ ಲಾಭಕ್ಕಾಗಿ ಕೆಲವರು ಇದನ್ನು ಬಳಸಿಕೊಳ್ಳುತ್ತಾರೆ. ನಮ್ಮ ಈ ನಿರ್ಧಾರದಿಂದ ಅವರ ನಡೆ ಹೇಗಿರುತ್ತದೆ ನೋಡೋಣ” ಎಂದು ಪ್ರತಿಕ್ರಿಯಿಸಿದ್ದಾರೆ.

ಈ ಘಟನೆ ಸಾಮಾಜಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಸಮಾನತೆ ಮತ್ತು ಗುರುತಿನ ಪ್ರಶ್ನೆಗಳ ಕುರಿತು ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share