Monday, September 7, 2026
Join WhatsApp Group
HomeCrimeಬೊಮ್ಮನಳ್ಳಿ ಕ್ರಾಸ್‌ನಲ್ಲಿ ಓಸಿ ಜೂಜಾಟ; ನಗದು ಸಹಿತ ವ್ಯಕ್ತಿ ವಶಕ್ಕೆ

ಬೊಮ್ಮನಳ್ಳಿ ಕ್ರಾಸ್‌ನಲ್ಲಿ ಓಸಿ ಜೂಜಾಟ; ನಗದು ಸಹಿತ ವ್ಯಕ್ತಿ ವಶಕ್ಕೆ

ಶಿರಸಿ: ಸಾರ್ವಜನಿಕ ಸ್ಥಳದಲ್ಲಿ ಓಸಿ ಜೂಜಾಟ ನಡೆಸುತ್ತಿದ್ದ ಆರೋಪದ ಮೇಲೆ ಶಿರಸಿ ಗ್ರಾಮೀಣ ಪೊಲೀಸರು ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಶಿರಸಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಶಿರಸಿ–ಯಲ್ಲಾಪುರ ರಸ್ತೆಯ ಬೊಮ್ಮನಳ್ಳಿ ಕ್ರಾಸ್‌ನ ಕಡವೆ ಬಸ್‌ಸ್ಟಾಪ್ ಬಳಿ ಆ.11ರಂದು ಸಂಜೆ 7.45ರ ಸುಮಾರಿಗೆ ಕೆಳಗಿನ ಬೊಮ್ಮನಳ್ಳಿ ನಿವಾಸಿ ಯೋಗೇಶ ರಾಮ ಭಂಡಾರಿ (43) ಎಂಬಾತ ಸಾರ್ವಜನಿಕರಿಗೆ ಕೂಗಿ ಕರೆದು, ಓಸಿ ಜೂಜಾಟದ ಅಂಕಿ-ಸಂಖ್ಯೆಗಳ ಮೇಲೆ ಹಣ ಪಣ ಕಟ್ಟುವಂತೆ ಪ್ರೇರೇಪಿಸುತ್ತಿದ್ದ.

ಪೊಲೀಸ್ ಉಪನಿರೀಕ್ಷಕ ಸಂತೋಷಕುಮಾರ ಎಂ ಅವರ ನೇತೃತ್ವದಲ್ಲಿ ಸಿಬ್ಬಂದಿ ಹಾಗೂ ಪಂಚರೊಂದಿಗೆ ದಾಳಿ ನಡೆಸಿದಾಗ ಆರೋಪಿತನ ಬಳಿಯಲ್ಲಿ ₹450 ನಗದು, ಒಂದು ಬಾಲ್‌ಪೆನ್, ಓಸಿ ಅಂಕಿ-ಸಂಖ್ಯೆ ಬರೆದ ಒಂದು ಚೀಟಿ ಪತ್ತೆಯಾಗಿವೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share