Monday, September 7, 2026
Join WhatsApp Group
HomeLocal Newsಬೆಟ್ಟದ ಹಕ್ಕಿನ ಹೋರಾಟಕ್ಕೆ ರೈತರ ಸಮಾವೇಶ

ಬೆಟ್ಟದ ಹಕ್ಕಿನ ಹೋರಾಟಕ್ಕೆ ರೈತರ ಸಮಾವೇಶ

ಆಗಸ್ಟ್‌ 8ರಂದು ಯಲ್ಲಾಪುರದಲ್ಲಿ ಜಾಗೃತಿ ಕಾರ್ಯಾಗಾರ

ಯಲ್ಲಾಪುರ: ಅರಣ್ಯ ಇಲಾಖೆಯಿಂದ ಬೆಟ್ಟ ಬಳಕೆದಾರ ರೈತರು ಎದುರಿಸುತ್ತಿರುವ ಸಮಸ್ಯೆಗಳು, ಬೆಟ್ಟ ಬಳಕೆಯ ಹಕ್ಕುಗಳ ರಕ್ಷಣೆ ಹಾಗೂ ಕಾನೂನುಬದ್ಧ ಪರಿಹಾರಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಆಗಸ್ಟ್‌ 8ರಂದು ಯಲ್ಲಾಪುರದಲ್ಲಿ ವಿಶೇಷ ಜಾಗೃತಿ ಕಾರ್ಯಾಗಾರ ಆಯೋಜಿಸಲಾಗಿದೆ.

ತಾಲೂಕಿನ ಟಿಎಂಎಸ್‌ ಸಭಾಭವನದಲ್ಲಿ ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು,
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹಾಗೂ ಸಾಮಾಜಿಕ ಮುಖಂಡ ಹರಿಪ್ರಕಾಶ ಕೋಣೆಮನೆ ವಹಿಸಲಿದ್ದಾರೆ.

ಟಿಆರ್‌ಸಿ ಶಿರಸಿಯ ಅಧ್ಯಕ್ಷ ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ, ಸಿದ್ದಾಪುರದ ಖ್ಯಾತ ವಕೀಲ ರವಿ ಹೆಗಡೆ ಹೂವಿನಮನೆ, ಟಿಎಂಎಸ್‌ ಯಲ್ಲಾಪುರ ಅಧ್ಯಕ್ಷ ನಾರಾಯಣ ಭಟ್ ಅಗ್ಗಾಶಿಕುಂಬ್ರಿ, ಅರಣ್ಯ ಹಕ್ಕು ಸಂರಕ್ಷಣಾ ಸಮಿತಿ ಅಧ್ಯಕ್ಷ ಆರ್‌.ಕೆ. ಭಟ್ ಹಾಗೂ ಬೆಟ್ಟ ಜಾಗೃತಿ ಅಭಿಯಾನದ ಸಂಘಟಕ ಎಸ್‌.ಕೆ. ಭಾಗ್ವತ್ ಶಿರ್ಸಿಮಕ್ಕಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ರೈತರ ಹಕ್ಕುಗಳು, ಕಾನೂನು ಅಂಶಗಳು ಹಾಗೂ ಅರಣ್ಯ ಇಲಾಖೆಯೊಂದಿಗೆ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ಮಾಹಿತಿ ನೀಡಲಿದ್ದಾರೆ.

ಕಾರ್ಯಾಗಾರದ ಸಂಚಾಲಕ ಕೆ.ಟಿ. ಹೆಗಡೆ ಆನಗೋಡು, ಸದಸ್ಯರಾದ ನಾಗರಾಜ್ ಕವಡಿಕೆರೆ, ವಿಶ್ವನಾಥ್ ಹಳೆಮನೆ, ಗಣೇಶ ಹೆಗಡೆ, ರವಿ ಭಟ್, ಅಪ್ಪು ಆಚಾರಿ, ಮಹೇಶ್ ದೇಸಾಯಿ, ಸುಬ್ಬಣ್ಣ ಉದ್ದಾಬೈಲ, ಗಾಂಧಿ ಸೋಮಾಪುರಕರ, ದೀಪಕ್ ಭಟ್, ಪವನ್ ಕೇಸರಕರ, ಮಾದೇವ ನಾಯ್ಕ ಸರ್ವರಿಗೂ ಸ್ವಾಗತ ಕೋರಿದ್ದಾರೆ.

ಬೆಟ್ಟ ಬಳಕೆದಾರರ ಹಕ್ಕುಗಳ ಕುರಿತು ರೈತರಿಗೆ ಜಾಗೃತಿ ಮೂಡಿಸುವ ಈ ಸಭೆಯಲ್ಲಿ ತಾಲೂಕಿನ ಎಲ್ಲಾ ಕೃಷಿಕರು ಹಾಗೂ ಬೆಟ್ಟ ಬಳಕೆದಾರರು ಸಕ್ರಿಯವಾಗಿ ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಮಂಡಿಸುವಂತೆ ಆಯೋಜಕರು ಕೋರಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share