Saturday, May 30, 2026
HomeLocal Newsಮೊಸಳೆ ದಾಳಿಗೆ ನಡುಗಿದ ದಾಂಡೇಲಿ

ಮೊಸಳೆ ದಾಳಿಗೆ ನಡುಗಿದ ದಾಂಡೇಲಿ

ದಾಂಡೇಲಿ: ಇಲ್ಲಿನ ಕುಳಗಿ ರಸ್ತೆ ಸಮೀಪದ ಕಾಳಿ ನದಿಯಲ್ಲಿ ಭಾನುವಾರ ಬೆಳಗ್ಗೆ ನಡೆದ ಮೊಸಳೆ ದಾಳಿಯಲ್ಲಿ ಸ್ಥಳೀಯ ನಿವಾಸಿ ಆನಂದ್ ನಲ್ಲೂಜಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಬೆಳಗ್ಗೆ ಸುಮಾರು 8 ಗಂಟೆ ವೇಳೆಗೆ ನದಿಯತ್ತ ತೆರಳಿದ್ದ ವೇಳೆ ಏಕಾಏಕಿ ಮೊಸಳೆ ದಾಳಿ ನಡೆಸಿದ್ದು, ಅವರ ಕಾಲಿಗೆ ಗಂಭೀರ ಗಾಯಗಳಾಗಿವೆ. ಆನಂದ್ ಅವರ ಕೂಗನ್ನು ಕೇಳಿದ ಸ್ಥಳೀಯರು ತಕ್ಷಣ ಧಾವಿಸಿ ರಕ್ಷಿಸಿದ್ದಾರೆ.

ಗಾಯಗೊಂಡ ಅವರನ್ನು ದಾಂಡೇಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗೆ ಧಾರವಾಡಕ್ಕೆ ರವಾನಿಸಲಾಗಿದೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇತ್ತೀಚಿನ ಈ ಘಟನೆ ದಾಂಡೇಲಿ ಪ್ರದೇಶದಲ್ಲಿ ಪದೇ ಪದೇ ಮೊಸಳೆ ಪ್ರತ್ಯಕ್ಷವಾಗುತ್ತಿದ್ದು, ಮತ್ತೆ ಭೀತಿ ಹೆಚ್ಚಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share