ದಾಂಡೇಲಿ: ಕ್ರೆಡಿಟ್ ಕಾರ್ಡ್ ಅಪ್‌ಡೇಟ್ ಮಾಡುವ ನೆಪದಲ್ಲಿ ವ್ಯಕ್ತಿಯೊಬ್ಬರಿಂದ 1,23,786 ರೂ ಹಣ ವಂಚಿಸಿರುವ ಘಟನೆಗೆ ಸಂಬಂಧಿಸಿ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೋಯಿಡಾ ತಾಲೂಕಿನ ಪಣಸೋಲಿಯ ಮುನಿರಾಜ ಗೋವಿಂದಸ್ವಾಮಿ ನಾಯ್ಡು (51) ವಂಚನೆಗೆ ಒಳಗಾದವರಾಗಿದ್ದು, ಈ ಕುರಿತು ಅವರು ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಾರ್ಚ್ 21ರಂದು ಸಂಜೆ 7 ಗಂಟೆ ಸುಮಾರಿಗೆ 8131876348 ಸಂಖ್ಯೆಯಿಂದ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ ತಾನು ಎಸ್‌ಬಿಐ ಬ್ಯಾಂಕ್ ಮೇನ್ ಬ್ರಾಂಚ್‌ನಿಂದ ಮಾತನಾಡುತ್ತಿರುವುದಾಗಿ ಹೇಳಿದ್ದಾನೆ. ನಿಮ್ಮ ಕ್ರೆಡಿಟ್ ಕಾರ್ಡ್ ಎಕ್ಸ್‌ಪೈರ್ ಆಗಲಿದ್ದು, ತಕ್ಷಣ ಅಪ್‌ಡೇಟ್ ಮಾಡಬೇಕು. ಇಲ್ಲವಾದರೆ ಕಾರ್ಡ್ ಸ್ಥಗಿತಗೊಳ್ಳುತ್ತದೆ ಎಂದು ನಂಬಿಸಿದ್ದಾನೆ.
ಬಳಿಕ ಕ್ರೆಡಿಟ್ ಕಾರ್ಡ್ ವಿವರಗಳನ್ನು ಪಡೆದುಕೊಂಡು ಐದು ಬಾರಿ ಒಟಿಪಿ (OTP) ಸಂಖ್ಯೆಯನ್ನು ಕೇಳಿ ಪಡೆದು, ಒಟ್ಟು 1,23,786 ರೂ ಹಣವನ್ನು ಮೋಸದ ಮೂಲಕ ವರ್ಗಾವಣೆ ಮಾಡಿಕೊಂಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.