Friday, July 24, 2026
Join WhatsApp Group
HomeNationalಮುಸ್ಲಿಂ ಮತದಾರರ ವಾರ್ಡ್‌ನಲ್ಲಿ ಗೆದ್ದ ಹಿಂದೂ ಅಭ್ಯರ್ಥಿ

ಮುಸ್ಲಿಂ ಮತದಾರರ ವಾರ್ಡ್‌ನಲ್ಲಿ ಗೆದ್ದ ಹಿಂದೂ ಅಭ್ಯರ್ಥಿ

ಗೋಧ್ರಾ: ಗುಜರಾತಿನ ಗೋಧ್ರಾದಲ್ಲಿ ನಡೆದ 2026ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಅಪರೂಪದ ರಾಜಕೀಯ ಬೆಳವಣಿಗೆ ನಡೆದಿದೆ. ಶೇಕಡಾ 100 ಮುಸ್ಲಿಂ ಮತದಾರರೇ ಇರುವ ವಾರ್ಡ್‌ನಲ್ಲಿ ಸ್ವತಂತ್ರ ಹಿಂದೂ ಅಭ್ಯರ್ಥಿ ಅಪೇಕ್ಷಾಬೆನ್ ನೈನೇಶ್‌ಭಾಯ್ ಸೋನಿ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ.

ವಾರ್ಡ್ ಸಂಖ್ಯೆ 7ರಿಂದ ಸ್ಪರ್ಧಿಸಿದ್ದ ಅವರು ನಿರೀಕ್ಷೆ ಮೀರಿ ಗೆಲುವು ದಾಖಲಿಸಿದ್ದು, ಸಾಮಾಜಿಕ ಸಾಮರಸ್ಯದ ಸಂದೇಶವನ್ನು ನೀಡಿದೆ ಎಂದು ಹೇಳಲಾಗುತ್ತಿದೆ.

ಸ್ಥಳೀಯ ರಾಜಕೀಯ ವಲಯದಲ್ಲಿ ಈ ಫಲಿತಾಂಶವನ್ನು ಮೈಲಿಗಲ್ಲು ಎಂದು ಪರಿಗಣಿಸಲಾಗುತ್ತಿದೆ. ಧರ್ಮ ಅಥವಾ ಜಾತಿ ಆಧಾರಿತ ಮತದಾನದ ಪದ್ದತಿಗಳನ್ನು ಮೀರಿ, ಅಭ್ಯರ್ಥಿಯ ಕಾರ್ಯಕ್ಷಮತೆ ಮತ್ತು ಜನಸಂಪರ್ಕವನ್ನು ಗಮನಿಸಿ ಮತದಾರರು ನಿರ್ಧಾರ ಕೈಗೊಂಡಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ರಾಜಕೀಯ ವಿಶ್ಲೇಷಕರ ಪ್ರಕಾರ, ಮುಸ್ಲಿಂ ಮತದಾರರ ನಿರ್ಣಾಯಕ ಬೆಂಬಲದಿಂದಲೇ ಈ ಗೆಲುವು ಸಾಧ್ಯವಾಗಿದ್ದು, ಇದು ಸಾಮರಸ್ಯ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಒಳ್ಳೆಯ ಉದಾಹರಣೆ ಎಂದೂ ಹೇಳಲಾಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share