Ad
Ad
Ad
Home Local News ಗೃಹಜ್ಯೋತಿ ಪರಿಶೀಲನೆ; ಇನ್ನು 9 ದಿನವಷ್ಟೇ ಬಾಕಿ!

ಗೃಹಜ್ಯೋತಿ ಪರಿಶೀಲನೆ; ಇನ್ನು 9 ದಿನವಷ್ಟೇ ಬಾಕಿ!

0
25

ಕಾರವಾರ: ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮನೆ-ಮನೆ ಪರಿಶೀಲನಾ ಕಾರ್ಯ ಈಗ ಅಂತಿಮ ಹಂತಕ್ಕೆ ತಲುಪಿದ್ದು, ಪರಿಶೀಲನೆ ಪೂರ್ಣಗೊಳಿಸಲು ಸೆಪ್ಟೆಂಬರ್ 30 ಕೊನೆಯ ದಿನವಾಗಿದೆ.

Ad

ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮನೆ-ಮನೆ ಪರಿಶೀಲನಾ ಕಾರ್ಯವು 2026ರ ಜುಲೈನಲ್ಲಿ ಆರಂಭವಾಗಿದ್ದು, ಸೆಪ್ಟೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಈ ಹಿನ್ನೆಲೆಯಲ್ಲಿ ಹೆಸ್ಕಾಂ ಕಾರವಾರ ವಿಭಾಗದ ಮಾಪಕ ಓದುಗರು ಹಾಗೂ ಸಿಬ್ಬಂದಿ ಮನೆಗಳಿಗೆ ಭೇಟಿ ನೀಡಿ ಪರಿಶೀಲನಾ ಪ್ರಕ್ರಿಯೆ ಪೂರ್ಣಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಈ ಹಿಂದೆ ಭಾಗ್ಯಜ್ಯೋತಿ ಮತ್ತು ಕುಟೀರಜ್ಯೋತಿ ಸ್ಥಾವರಗಳ ಗ್ರಾಹಕರಿಗೆ ಸ್ವಯಂಚಾಲಿತವಾಗಿ ಗೃಹಜ್ಯೋತಿ ಯೋಜನೆಯ ಉಚಿತ ವಿದ್ಯುತ್ ಸೌಲಭ್ಯ ದೊರೆಯುವಂತೆ ಮಾಡಲಾಗಿತ್ತು. ಅಂತಹ ಗ್ರಾಹಕರ ದಾಖಲೆಗಳನ್ನು ಸರ್ವೆ ಆ್ಯಪ್‌ನಲ್ಲಿ ದಾಖಲಿಸಿ ಗೃಹಜ್ಯೋತಿ ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

ವಿವಿಧ ಕಾರಣಗಳಿಂದ ಇದುವರೆಗೆ ಮನೆ-ಮನೆ ಸರ್ವೆ ಸಾಧ್ಯವಾಗದ ಗ್ರಾಹಕರು ಕೂಡ ತಮ್ಮ ಮಾಪಕ ಓದುಗರಿಗೆ ಮಾಹಿತಿ ನೀಡಿ ಪರಿಶೀಲನಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದಾಗಿದೆ.

ಇದಲ್ಲದೆ, ಹೆಸ್ಕಾಂನ ಶಾಖಾ ಕಚೇರಿ ಹಾಗೂ ಕಾರವಾರ ಉಪವಿಭಾಗ ಕಚೇರಿಯಲ್ಲಿ ಸರ್ವೆ ಕೌಂಟರ್‌ಗಳನ್ನು ತೆರೆಯಲಾಗಿದೆ. ಪರಿಶೀಲನೆ ಬಾಕಿ ಇರುವ ಗ್ರಾಹಕರು ಅಗತ್ಯ ದಾಖಲೆಗಳೊಂದಿಗೆ ಕಚೇರಿಗೆ ಖುದ್ದಾಗಿ ಭೇಟಿ ನೀಡಿ ಸೆಪ್ಟೆಂಬರ್ 30ರೊಳಗೆ ಸರ್ವೆ ಕಾರ್ಯವನ್ನು ಪೂರ್ಣಗೊಳಿಸಿಕೊಳ್ಳಬಹುದಾಗಿದೆ ಎಂದು ಹೆಸ್ಕಾಂ ಕಾರವಾರದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

error: Content is protected !!