Friday, March 13, 2026
HomeInformationಇಲ್ಲಿದೆ ಭಾರತದ ಮೊದಲ Musical Road!

ಇಲ್ಲಿದೆ ಭಾರತದ ಮೊದಲ Musical Road!

ಮುಂಬೈ: ಮುಂಬೈನ ಛತ್ರಪತಿ ಸಂಭಾಜಿ ಮಹಾರಾಜ್ ಕರಾವಳಿ ರಸ್ತೆ (Mumbai Coastal Road) ಈಗ ಭಾರತದ ಮೊಟ್ಟಮೊದಲ ‘ಸಂಗೀತ ರಸ್ತೆ’ (Musical Road) ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಫೆಬ್ರವರಿ 11ರಂದು  ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೇತೃತ್ವದಲ್ಲಿ  ಲೋಕಾರ್ಪಣೆಗೊಂಡಿತು. ಮ್ಯೂಸಿಕಲ್ ರಸ್ತೆಯ ಕುರಿತಾದ ಕುತೂಹಲಕಾರಿ ಮಾಹಿತಿಗಳು ಇಲ್ಲಿವೆ.

ಈ ರಸ್ತೆಯ ಒಂದು ನಿರ್ದಿಷ್ಟ ಭಾಗದಲ್ಲಿ ವಾಹನ ಚಲಾಯಿಸಿದಾಗ, ಆಸ್ಕರ್ ಪ್ರಶಸ್ತಿ ಪಡೆದ ‘ಜೈ ಹೋ’ ಹಾಡಿನ ಸಂಗೀತ ಕೇಳಿಸುತ್ತದೆ. ಆದರೆ ಇದು ರೇಡಿಯೋ ಅಥವಾ ಸ್ಪೀಕರ್‌ನಿಂದ ಬರುವ ಶಬ್ದವಲ್ಲ, ಬದಲಾಗಿ ರಸ್ತೆಯ ತಂತ್ರಜ್ಞಾನದಿಂದ ಮೂಡುವ ಸಂಗೀತ!

ಇನ್ನು, ಇದರ ಕಾರ್ಯ ವಿಧಾನವೂ ರೋಚಕವಾಗಿದೆ. ರಸ್ತೆಯ ಮೇಲೆ ಹಂಗೇರಿಯನ್ ತಂತ್ರಜ್ಞಾನದ ಸಣ್ಣ ಸಣ್ಣ ಪಟ್ಟಿಗಳನ್ನು ಕೆತ್ತಲಾಗಿದೆ. ವಾಹನದ ಚಕ್ರಗಳು ಈ ಪಟ್ಟಿಗಳ ಮೇಲೆ ಚಲಿಸಿದಾಗ ಉಂಟಾಗುವ ಘರ್ಷಣೆ ಮತ್ತು ಕಂಪನವು ಸಂಗೀತದ ಸ್ವರಗಳನ್ನು ಹೊರಹೊಮ್ಮಿಸುತ್ತದೆ. ಈ ಮ್ಯಾಜಿಕ್ ಅನುಭವಿಸಲು ಚಾಲಕರು ನಿಖರವಾಗಿ ಗಂಟೆಗೆ 60–80 ಕಿ.ಮೀ ವೇಗದಲ್ಲಿಯೇ ಚಲಿಸಬೇಕು. ಈ ವೇಗಕ್ಕಿಂತ ಬದಲಾದರೆ ಸಂಗೀತದ ಶ್ರುತಿ ತಪ್ಪುತ್ತದೆ.

ಮುಂಬೈನ ಕರಾವಳಿ ರಸ್ತೆಯ ಉತ್ತರ ದಿಕ್ಕಿನ ನಾರಿಮನ್ ಪಾಯಿಂಟ್‌ನಿಂದ ವರ್ಲಿ ಕಡೆಗೆ ಹೋಗುವಾಗ ಸುರಂಗದ ಹೊರಭಾಗದಲ್ಲಿ ಈ 500 ಮೀಟರ್ ಉದ್ದದ ಮ್ಯೂಸಿಕಲ್ ರಸ್ತೆ ಇದೆ. ಇದು ಕೇವಲ ಮನರಂಜನೆಯ ‌ಉದ್ದೇಶಕ್ಕಾಗಷ್ಟೇ ಅಲ್ಲದೇ, ಚಾಲಕರು ವೇಗದ ಮಿತಿಯನ್ನು ಮೀರುವುದನ್ನು ತಡೆಯಲು ಮತ್ತು ಸುದೀರ್ಘ ಪ್ರಯಾಣದಲ್ಲಿ ಅವರು ಎಚ್ಚರವಾಗಿರಲು ಸಹಾಯ ಮಾಡುತ್ತದೆ ಎಂದು ಬೃಹತ್ ಮುಂಬೈ ಮಹಾನಗರ ಪಾಲಿಕೆ (BMC) ಮಾಹಿತಿ ನೀಡಿದೆ.

ಜಾಗತಿಕ ಮಟ್ಟದಲ್ಲಿ ಜಪಾನ್, ಕೊರಿಯಾ ಮತ್ತು ಯುಎಸ್ಎ ನಂತರ ಈ ತಂತ್ರಜ್ಞಾನ ಹೊಂದಿರುವ ಕೆಲವೇ ರಾಷ್ಟ್ರಗಳ ಸಾಲಿಗೆ ಭಾರತ ಸೇರಿರುವುದು ನಮಗೆ ಹೆಮ್ಮೆಯಲ್ಲವಾ?!

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share