Friday, March 13, 2026
HomeEducationಇಸ್ರೋ YUVIKA 2026: ಮಕ್ಕಳ ಕನಸಿಗೆ ಬಣ್ಣ ತುಂಬಿ!

ಇಸ್ರೋ YUVIKA 2026: ಮಕ್ಕಳ ಕನಸಿಗೆ ಬಣ್ಣ ತುಂಬಿ!

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಯುವ ವಿಜ್ಞಾನಿಗಳಿಗಾಗಿ ರೂಪಿಸಿರುವ “ಯುವ ವಿಜ್ಞಾನಿ ಕಾರ್ಯಕ್ರಮ” (YUVIKA) 2026ಕ್ಕಾಗಿ ಅರ್ಜಿ ಪ್ರಕ್ರಿಯೆ ಫೆಬ್ರವರಿ 27, 2026ರಿಂದ ಆರಂಭವಾಗಲಿದೆ. ವಿಜ್ಞಾನ ಮತ್ತು ಬಾಹ್ಯಾಕಾಶ ಕ್ಷೇತ್ರದತ್ತ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಇದು ಉತ್ತಮ ಅವಕಾಶ. ISRO ನಡೆಸುತ್ತಿರುವ “Young Scientist Programme–YUVIKA” ಎಂಬುದು ಶಾಲಾ ಮಕ್ಕಳಿಗೆ ಬಾಹ್ಯಾಕಾಶ ತಂತ್ರಜ್ಞಾನ, ಬಾಹ್ಯಾಕಾಶ ವಿಜ್ಞಾನ ಮತ್ತು ಅದರ ಅನ್ವಯಿಕೆಗಳ ಬಗ್ಗೆ ಮೂಲಭೂತ ಜ್ಞಾನ ನೀಡುವ ವಿಶೇಷ ಕಾರ್ಯಕ್ರಮವಾಗಿದೆ.

ಈ ಎರಡು ವಾರಗಳ ವಸತಿ ಆಧಾರಿತ (Residential) ಕಾರ್ಯಕ್ರಮಕ್ಕೆ ಆಸಕ್ತ ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ jigyasa.iirs.gov.in/yuvika/#ನಲ್ಲಿ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು

ಕಾರ್ಯಕ್ರಮ ಘೋಷಣೆ: ಫೆಬ್ರವರಿ 20, 2026

ಅರ್ಜಿ ಪ್ರಾರಂಭ ದಿನಾಂಕ: ಫೆಬ್ರವರಿ 27, 2026

ಅರ್ಜಿ ಸಲ್ಲಿಸಲು ಕೊನೆಯ ದಿನ: ಮಾರ್ಚ್ 31, 2026

ಮೊದಲ ಆಯ್ಕೆ ಪಟ್ಟಿಯ ಪ್ರಕಟಣೆ: ಏಪ್ರಿಲ್ 13, 2026

ಎರಡನೇ ಆಯ್ಕೆ ಪಟ್ಟಿ (ಅವಶ್ಯಕವಾದರೆ): ಏಪ್ರಿಲ್ 20, 2026

ಕಾರ್ಯಕ್ರಮ ನಡೆಯುವ ಅವಧಿ: ಮೇ 11ರಿಂದ ಮೇ 22, 2026

YUVIKA ಕಾರ್ಯಕ್ರಮದ ಉದ್ದೇಶವೇನು?

 “Catch Them Young” ಎಂಬ ಉದ್ದೇಶದೊಂದಿಗೆ ರೂಪಿಸಲಾದ ಈ ಯೋಜನೆ ವಿದ್ಯಾರ್ಥಿಗಳಲ್ಲಿ ವಿಜ್ಞಾನ ಮನೋಭಾವ ಬೆಳೆಸುವುದು, ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದ ಬಗ್ಗೆ ಪ್ರಾಥಮಿಕ ಪರಿಚಯ ನೀಡುವುದು, STEM (Science, Technology, Engineering, Mathematics) ಕ್ಷೇತ್ರಗಳಲ್ಲಿ ಭವಿಷ್ಯದ ವೃತ್ತಿ ಆಯ್ಕೆ ಮಾಡಲು ಪ್ರೇರೇಪಿಸುವುದು, ಸಂಶೋಧನಾ ಮನೋಭಾವ ಬೆಳೆಸುವ ಮಹತ್ತರ ಉದ್ದೇಶ ಹೊಂದಿದೆ.

ಅರ್ಹತಾ ಮಾನದಂಡಗಳು

  • ವಿದ್ಯಾರ್ಥಿಗಳು ಜನವರಿ 1, 2026ರ ವೇಳೆಗೆ 9ನೇ ತರಗತಿಯಲ್ಲಿ ಓದುತ್ತಿರಬೇಕು.
  • 8ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.

ಆಯ್ಕೆ ಪ್ರಕ್ರಿಯೆ ಹೇಗೆ?

ವಿದ್ಯಾರ್ಥಿಗಳ ಆಯ್ಕೆ ಕೆಳಗಿನ ಮಾನದಂಡಗಳ ಆಧಾರದ ಮೇಲೆ ನಡೆಯಲಿದೆ:

  • 8ನೇ ತರಗತಿ ಅಂಕಗಳಿಗೆ 50 ಅಂಕಗಳ ತೂಕ.
  • ಕ್ವಿಜ್‌ ಪರೀಕ್ಷೆಗೆ 10 ಅಂಕಗಳು.
  • ಕಳೆದ ಮೂರು ವರ್ಷಗಳಲ್ಲಿ ವಿಜ್ಞಾನ ಪ್ರದರ್ಶನಗಳು ಹಾಗೂ ಸಹಪಾಠ್ಯ ಚಟುವಟಿಕೆಗಳಲ್ಲಿ ಭಾಗವಹಿಸಿರುವುದಕ್ಕೆ 2ರಿಂದ 20 ಅಂಕಗಳು.

ಒಟ್ಟು ಅಂಕಗಳ ಆಧಾರದ ಮೇಲೆ ವಿದ್ಯಾರ್ಥಿಗಳ ಅಂತಿಮ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ

  1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: jigyasa.iirs.gov.in/yuvika/#
  2. “Apply for YUVIKA Registration” ಲಿಂಕ್ ಮೇಲೆ ಕ್ಲಿಕ್ ಮಾಡಿ.
  3. ಮೊದಲು “Register” ಆಯ್ಕೆ ಮಾಡಿ ಅಗತ್ಯ ಮಾಹಿತಿಯನ್ನು ನಮೂದಿಸಿ ನೋಂದಣಿ ಪೂರ್ಣಗೊಳಿಸಿ.
  4. ಲಾಗಿನ್ ವಿವರಗಳನ್ನು ಬಳಸಿ ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸಿ.

ಗಮನಿಸಿ

ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿ ಮತ್ತು ವಿಜ್ಞಾನ ಚಟುವಟಿಕೆಗಳ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳುವುದು ಉತ್ತಮ. ಕೊನೆಯ ದಿನಾಂಕದವರೆಗೆ ಕಾಯದೆ ಮುಂಚಿತವಾಗಿಯೇ ಅರ್ಜಿ ಸಲ್ಲಿಸಲು ISRO ಸಲಹೆ ನೀಡಿದೆ.

ಮತ್ತಿನ್ನೇಕೆ ತಡ, ಕೂಡಲೇ ಅರ್ಜಿ ಸಲ್ಲಿಸಲು ನಿಮ್ಮ ಅರ್ಹ ಮಕ್ಕಳನ್ನು ಪ್ರೇರೇಪಿಸಿ, ಅವರ ಕನಸುಗಳಿಗೆ ಬಣ್ಣ ತುಂಬಿ!

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share