ಸಂಶೋಧನಾರ್ಥಿಗಳಿಂದ ಅರ್ಜಿ ಆಹ್ವಾನ
ಕಾರವಾರ: ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರವು 2026-27ನೇ ಸಾಲಿನ ಕಿರು ಅಧ್ಯಯನ ಯೋಜನೆಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಆಯ್ಕೆಯಾಗುವ ಸಂಶೋಧನಾರ್ಥಿಗಳಿಗೆ 12 ತಿಂಗಳ ಅವಧಿಗೆ ತಲಾ ₹1.50 ಲಕ್ಷ ಫೆಲೋಶಿಪ್ ನೀಡಲಾಗುತ್ತದೆ.
ಅಧ್ಯಯನಕ್ಕಾಗಿ ಕನಕದಾಸರ ಸಾಹಿತ್ಯದಲ್ಲಿ ಧರ್ಮ, ತತ್ವಪದಕಾರರ ಲೋಕಪ್ರಜ್ಞೆ ಮತ್ತು ಸಮಕಾಲೀನತೆ, ಭಾರತೀಯ ಭಕ್ತಿಮಾರ್ಗ ಮತ್ತು ತಳಸಮುದಾಯದ ಸಂತರು, ಹಾಗೂ ಕೀರ್ತನ ಸಾಹಿತ್ಯ ಮತ್ತು ಸಮುದಾಯ: ಪ್ರಸಾರ ಮತ್ತು ಪ್ರಭಾವದ ಬಹುಮುಖ ನೆಲೆಗಳು ಸೇರಿದಂತೆ ವಿವಿಧ ವಿಷಯಗಳನ್ನು ನಿಗದಿಪಡಿಸಲಾಗಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ, ಸಂಶೋಧನಾ ಅನುಭವ, ಆಸಕ್ತಿ ಕ್ಷೇತ್ರದ ವಿವರಗಳ ಜೊತೆಗೆ ಆಯ್ಕೆ ಮಾಡಿಕೊಂಡ ವಿಷಯದ ಅಧ್ಯಯನ ವ್ಯಾಪ್ತಿ ಹಾಗೂ ಬಳಸಲಿರುವ ಆಕರ ಸಾಮಗ್ರಿಗಳ ಕುರಿತ ಸಂಕ್ಷಿಪ್ತ ಸಾರಲೇಖವನ್ನು ಲಗತ್ತಿಸಬೇಕು.
ರಾಜ್ಯದ ಎಲ್ಲ ಭಾಗಗಳ 20ರಿಂದ 55 ವರ್ಷ ವಯೋಮಿತಿಯ ಆಸಕ್ತ ಸಂಶೋಧನಾರ್ಥಿಗಳು ಆಗಸ್ಟ್ 25ರೊಳಗೆ ಇ-ಮೇಲ್ ಅಥವಾ ಅಂಚೆ ಮೂಲಕ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ 63645 29319 ಅಥವಾ ದೂರವಾಣಿ 080-22113147 ಸಂಪರ್ಕಿಸಬಹುದು. ಅರ್ಜಿ ನಮೂನೆ ಹಾಗೂ ಸಂಪೂರ್ಣ ವಿವರಗಳು kanakaresearchcentre@gmail.com ಇ-ಮೇಲ್ ಹಾಗೂ https://kanakadasaresearchcenter.karnataka.gov.in ವೆಬ್ಸೈಟ್ನಲ್ಲಿ ಲಭ್ಯವಿವೆ ಎಂದು ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಸದಸ್ಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.