Monday, September 7, 2026
Join WhatsApp Group
HomeLocal Newsಬ್ಯಾರಿಕೇಡ್‌ಗೆ ಗುದ್ದಿದ ಕಾರು; ಚಾಲಕನ ವಿರುದ್ಧ ಪ್ರಕರಣ

ಬ್ಯಾರಿಕೇಡ್‌ಗೆ ಗುದ್ದಿದ ಕಾರು; ಚಾಲಕನ ವಿರುದ್ಧ ಪ್ರಕರಣ

ಕಾರವಾರ: ರಾಷ್ಟ್ರೀಯ ಹೆದ್ದಾರಿ–66ರಲ್ಲಿ ಕಾರನ್ನು ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿ ರಸ್ತೆ ಬದಿಯ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ ಘಟನೆ ಸಂಬಂಧ ಕಾರವಾರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸದಾಶಿವಗಡದ ಜನತಾ ಪ್ಲಾಟ್ ನಿವಾಸಿ ಸನ್ನಿ ಸಂತೋಷ ಪೆಡ್ನೇಕರ್ (26) ಅವರು ನೀಡಿದ ದೂರಿನ ಮೇರೆಗೆ, ಪ್ರತೀಕ ಅನಿಲ ಕಲ್ಗುಟಕರ್ (29) ಪ್ರಕರಣ ದಾಖಲಿಸಲಾಗಿದೆ.

ಜುಲೈ 28ರಂದು ಸಂಜೆ ಸುಮಾರು 4.30ರ ವೇಳೆಗೆ, ಎಂಎಚ್-46-ಎಎಲ್-7518 ಸಂಖ್ಯೆಯ ಕಾರಿನಲ್ಲಿ ಸನ್ನಿ ಸಂತೋಷ ಪೆಡ್ನೇಕರ್ ಅವರನ್ನು ಕೂರಿಸಿಕೊಂಡು ಕಾರವಾರದಿಂದ ಸದಾಶಿವಗಡ ಕಡೆಗೆ ರಾಷ್ಟ್ರೀಯ ಹೆದ್ದಾರಿ–66ರ ಏಕಮುಖ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ, ಕಾರವಾರದ ಉಜ್ವಲ ಲಕ್ಷ್ಮೀ ಹಾಲ್ ಸಮೀಪ ಚಾಲಕ ಕಾರನ್ನು ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿದ್ದಾನೆ. ಪರಿಣಾಮ ರಸ್ತೆ ಬದಿಯ ಬ್ಯಾರಿಕೇಡ್‌ಗೆ ಕಾರು ಡಿಕ್ಕಿ ಹೊಡೆದು ವಾಹನ ಜಖಂಗೊಂಡಿದೆ.

ಘಟನೆ ಸಂಬಂಧ ಕಾರವಾರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share