Monday, September 7, 2026
Join WhatsApp Group
HomeLocal Newsಲೆಫ್ಟೋ, ರೈಟೋ?!; ಇಲ್ಲೇನೋ ದೋಷವಿದೆ!

ಲೆಫ್ಟೋ, ರೈಟೋ?!; ಇಲ್ಲೇನೋ ದೋಷವಿದೆ!

ಕಾರಾಗೃಹ ಇಲಾಖೆಯ ಜೀಪ್ ವಶಕ್ಕೆ ಪಡೆದ ಸಂಚಾರಿ ಪೊಲೀಸರು

ಕಾರವಾರ: ಸಾಮಾನ್ಯ ವಾಹನ ಸವಾರರು ಸಂಚಾರಿ ನಿಯಮ ಉಲ್ಲಂಘಿಸಿದರೆ ದಂಡ ಕಟ್ಟುವುದು ಅನಿವಾರ್ಯ. ಆದರೆ ನಿಯಮಗಳನ್ನು ಪಾಲಿಸಬೇಕಾದ ಸರ್ಕಾರಿ ಇಲಾಖೆಯೇ ಕಾನೂನು ಉಲ್ಲಂಘಿಸಿದರೆ ಏನಾಗುತ್ತದೆ? ಕಾರವಾರದಲ್ಲಿ ನಡೆದ ಒಂದು ಘಟನೆ ಈ ಪ್ರಶ್ನೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ.

ಕಾರವಾರದ ಕೇಂದ್ರ ಕಾರಾಗೃಹದ ಜೈಲರ್ ಬಳಸುತ್ತಿದ್ದ ಸರ್ಕಾರಿ ಜೀಪನ್ನು ಸಂಚಾರಿ ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದಾರೆ. ವಾಹನದ ವಿಮಾ ಅವಧಿ ಮುಗಿದಿದ್ದರೂ ಅದನ್ನು ರಸ್ತೆಗೆ ಇಳಿಸಿ ಬಳಸಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ.

ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರು ಈ ಜೀಪಿನ ವಿರುದ್ಧ ಹಲವು ದಿನಗಳಿಂದ ಗಮನ ಹರಿಸಿದ್ದರು. ಅವರ ಆರೋಪದಂತೆ, ಜೈಲರ್ ಹೇಮಾವತಿ ಅವರು ಬಳಸುತ್ತಿದ್ದ ಸರ್ಕಾರಿ ಜೀಪಿಗೆ 15 ವರ್ಷಕ್ಕೂ ಹೆಚ್ಚು ವಯಸ್ಸಾಗಿದ್ದು, ಅದರ ವಿಮಾ ಅವಧಿಯೂ ಹಲವು ವರ್ಷಗಳ ಹಿಂದೆ ಮುಕ್ತಾಯಗೊಂಡಿದೆ. ಇದಲ್ಲದೆ ವಾಹನದ ತಾಂತ್ರಿಕ ಸ್ಥಿತಿಯೂ ಹದಗೆಟ್ಟಿದ್ದು, ಎಡದ ಇಂಡಿಕೇಟರ್ ಹಾಕಿದರೆ ಬಲದ ಲೈಟ್ ಹೊತ್ತಿಕೊಳ್ಳುವಂತಹ ದೋಷಗಳಿವೆ ಎಂದು ಅವರು ಆರೋಪಿಸಿದ್ದಾರೆ.

ಶನಿವಾರ ಈ ಜೀಪಿನ ಸಂಚಾರವನ್ನು ವಿಡಿಯೋ ಮೂಲಕ ದಾಖಲಿಸಿಕೊಂಡ ಮಾಧವ ನಾಯಕ ಅವರು ಸಂಚಾರಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಕಾರಾಗೃಹ ಸಿಬ್ಬಂದಿ ಜೀಪಿನಲ್ಲಿ ಸಂಚರಿಸುತ್ತಿದ್ದ ವೇಳೆ ಅದನ್ನು ತಡೆದು ಪರಿಶೀಲನೆ ನಡೆಸಿ ವಶಕ್ಕೆ ಪಡೆದಿದ್ದಾರೆ.

ಘಟನೆಯ ನಂತರ ಸಾರ್ವಜನಿಕ ವಲಯದಲ್ಲಿ ಚರ್ಚೆ ಆರಂಭವಾಗಿದ್ದು, “ಖಾಸಗಿ ವಾಹನಗಳ ದಾಖಲೆಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸುವ ಅಧಿಕಾರಿಗಳು, ಸರ್ಕಾರಿ ವಾಹನಗಳ ವಿಷಯದಲ್ಲಿ ಏಕೆ ಮೌನವಾಗಿದ್ದರು?” ಎಂಬ ಪ್ರಶ್ನೆ ಕೇಳಿಬರುತ್ತಿದೆ. ವಿಮಾ ಅವಧಿ ಮುಗಿದು ವರ್ಷಗಳಾದರೂ, ವಾಹನ ರಸ್ತೆಗಿಳಿದಿದ್ದರೂ ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳ ಗಮನಕ್ಕೆ ಬರದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಸದ್ಯ ಪೊಲೀಸರು ವಾಹನವನ್ನು ವಶಕ್ಕೆ ಪಡೆದು ದಾಖಲೆಗಳ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮದ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share